
ಕರ್ನಾಟಕ
ಪಶುಭಾಗ್ಯ ಯೋಜನಾ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮಂಡ್ಯ (ಆಗಸ್ಟ್ 6): ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2019-20ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆ ಅಡಿಯಲ್ಲಿ ವಾಣಿಜ್ಯ ಅಥವಾ ಸಹಕಾರಿ ಬ್ಯಾಂಕುಗಳಿಂದ 60,000 ರೂ (ಅರವತ್ತು ಸಾವಿರ)ವರೆಗೆ ಗರಿಷ್ಠ ಸಾಲ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೂಲಿ ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿ ಕೊಂಡಿರುವ ಆಸಕ್ತ ರೈತರಿಗೆ ಹಸು, ಕುರಿ, ಆಡು, ಹಂದಿ ಘಟಕಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 90 ರಷ್ಟು ಹಾಗೂ ಇತರೆ ಜನಾಂಗದವರಿಗೆ ಶೇಕಡ 50ರಷ್ಟು ಬ್ಯಾಕ್ ಎಂಡೆಡ್ (backended) ಸಹಾಯಧನ ಒದಗಿಸಲಾಗುವುದು.
ಪಶುಭಾಗ್ಯ ಯೋಜನೆಯ ಸಮಾನ್ಯ ವರ್ಗ, ವಿಷೇಶ ಘಟಕ ಯೋಜನೆ ಮತ್ತು ಗಿರಿಜನ ಉಪೋಯೋಜನೆಗಳ ಅಡಿಯಲ್ಲಿ ಸಲಾ ಪಡೆಯಲು ಇಚ್ಛಿಸುವ ಮಂಡ್ಯ ಜಿಲ್ಲೆಯ ಅರ್ಹಫಲಾಪೇಕ್ಷಿಗಳು ಸಂಬಂಧಪಟ್ಟ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ನಿಗಧಿತ ನಮೂನೆಯ ಅರ್ಜಿಯನ್ನು ಸ್ವೀಕರಿಸಿ, ಅದೇ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 31 ರ ಸಂಜೆ 5.00 ಗಂಟೆಯೊಳಗಾಗಿ ಹತ್ತಿರದ ಪಶುವೈದ್ಯ ಸಂಸ್ಥೆಗಳಿಗೆ ಸಲ್ಲಿಸತಕ್ಕದ್ದು. ಆ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಾನುಭವಿಗಳು ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಕಾಳಿಕಾಂಬ ದೇವಸ್ಥಾನದ ಹತ್ತಿರ, ಮಂಡ್ಯ ದೂರವಾಣಿ ಸಂಖ್ಯೆ: 08232-220192, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮದ್ದೂರು ದೂರವಾಣಿ ಸಂಖ್ಯೆ: 08232-232088, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಳವಳ್ಳಿ ದೂರವಾಣಿ ಸಂಖ್ಯೆ: 08231-242251, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಶ್ರೀರಂಗಪಟ್ಟಣ ದೂರವಾಣಿ ಸಂಖ್ಯೆ: 08236-252307, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಪಾಂಡವಪುರ ದೂರವಾಣಿ ಸಂಖ್ಯೆ: 08236-255267, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಕೆ.ಆರ್.ಪೇಟೆ ದೂರವಾಣಿ ಸಂಖ್ಯೆ: 08230-262280, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ನಾಗಮಂಗಲ ದೂರವಾಣಿ ಸಂಖ್ಯೆ: 08234-286170 ಇವರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. (ಎನ್.ಬಿ)