ಮೈಸೂರು

ಹುಕ್ಕಾ ಬಾರ್‍ಗಳ ಮೇಲೆ ಸಿ.ಸಿ.ಬಿ. ಪೊಲೀಸರ ದಾಳಿ : ಪ್ರಕರಣ ದಾಖಲಿಸಿ 62,000ರೂ. ದಂಡ ಸಂಗ್ರಹ

ಮೈಸೂರು,ಆ.7:-  06/08/2019 ರಂದು ಮೈಸೂರು ನಗರದ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ ಕೋಟ್ಪಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ, ಹುಕ್ಕಾ ಬಾರ್ ನಡೆಸುತ್ತಿದ್ದ   18 ಪ್ಲಸ್ ಐಸ್ ಕೆಫೆ,  ಎಂಪೈರ್ ಹೋಟೆಲ್ ಎದುರು, ಕಾಳಿದಾಸ ರಸ್ತೆ, ಮೈಸೂರು ಇದರ ಮೇಲೆ ದಾಳಿ ಮಾಡಿ ಇಲ್ಲಿ ಕೋಟ್ಪಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಅಪ್ರಾಪ್ತರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಸಂಬಂಧ ಕೆಫೆಯ ಮ್ಯಾನೇಜರ್ ಮೇಲೆ ಕ್ರಮ ಜರುಗಿಸಿದ್ದಾರೆ.

ಕೆಫೆಯ ಮೇನೆಜರ್,  ಪುರುಷೋತ್ತಮ್.ಹೆಚ್.ಪಿ., ಬಿನ್ ಪುಟ್ಟಸ್ವಾಮಿ, (23 ), ರಾಘವೇಂದ್ರ ನಗರ, ಜೆ.ಎಸ್.ಎಸ್. ಲೇಔಟ್, ಮೈಸೂರು ರವರ ವಿರುದ್ದ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಂಡು   31,200ರೂ.  ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ,  ಹುಕ್ಕಾ ಬಾರ್ ಮುಚ್ಚಿಸಲಾಗಿದೆ.

ಅದೇ ರೀತಿ ಲಲಿತ ಮಹಲ್ ಹೆಲಿಪ್ಯಾಡ್ ಎದುರು, ದೇವರಾಜ ಡಾಬಾದ ಪಕ್ಕದಲ್ಲಿ ಇರುವ ಚಾರ್‍ಕೋಲ್ ಸರ್ಕ್ಯೂಟ್ ಕೆಫೆ ಮತ್ತು ರೆಸ್ಟೋರೆಂಟ್  ಮೇಲೆ ದಾಳಿ ಮಾಡಿ ಇಲ್ಲಿ ಕೋಟ್ಪಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಅಪ್ರಾಪ್ತರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಸಂಬಂದ  ಈ ಕೆಫೆಯ ಮೇನೆಜರ್,  ಲೋಹಿತ್.ಎಲ್ ಬಿನ್ ಲಕ್ಷ್ಮಣ್ ರಾಜ್, (23), ಟಿ.ಕೆ. ಲೇಔಟ್, ಮೈಸೂರು ಅವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಂಡು   30,800ರೂ.  ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ,  ಹುಕ್ಕಾ ಬಾರ್ ಮುಚ್ಚಿಸಲಾಗಿದೆ.

ಈ ದಾಳಿ ಕಾರ್ಯವನ್ನು ಡಿ.ಸಿ.ಪಿ. ( ಕಾ ಮತ್ತು ಸು)   ಮುತ್ತುರಾಜು. ಎಂ,  ಹಾಗೂ ಸಿ.ಸಿ.ಬಿ. ಘಟಕದ ಪ್ರಭಾರ ಎ.ಸಿ.ಪಿ.ರವರಾದ   ಜಿ.ಎನ್. ಮೋಹನ್‍  ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್ ಮಲ್ಲೇಶ್.ಎ, ಸಿಬ್ಬಂದಿಗಳಾದ ಪುರುಷೋತ್ತಮ್, ಕೆ.ಜೆ. ಶ್ರೀನಿವಾಸ್ ಮತ್ತು ಮೋಹನ್‍  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: