ಪ್ರಮುಖ ಸುದ್ದಿ

‘ಅವರು ನಮ್ಮೆಲ್ಲರಿಗೂ ತಾಯಿಯಂತಿದ್ದರು’ : ಭಾವುಕ ಪೋಸ್ಟ್ ಬರೆದ ಗಾಯಕ ಅದ್ನಾನ್ ಸಾಮಿ

ದೇಶ(ನವದೆಹಲಿ)ಆ.7:- ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ. ಬಾಲಿವುಡ್ ನ ಖ್ಯಾತ ನಾಮರಿಂದ ಹಿಡಿದು ಸಾರ್ವಜನಿಕರವರೆಗೆ ಎಲ್ಲರೂ ದುಃಖದ ಕಡಲಲ್ಲಿ ಮುಳುಗಿದ್ದಾರೆ. ಗಾಯಕ ಅದ್ನಾನ್ ಸಾಮಿ ಕೂಡ ಕಂಬನಿ ಮಿಡಿದಿದ್ದು, ಅವರನ್ನು ನೆನಪಿಸಿಕೊಳ್ಳುವ ಭಾವನಾತ್ಮಕ ಟ್ವೀಟ್ ಬರೆದು ಪೋಸ್ಟ್ ಮಾಡಿದ್ದಾರೆ.

‘ನಾನು ಮತ್ತು ನನ್ನ ಕುಟುಂಬ ಆಘಾತಕ್ಕೊಳಗಾಗಿದ್ದೇವೆ. ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಿಲ್ಲ.  ಸುಷ್ಮಾ ನನಗೆ ಮತ್ತು ನಮ್ಮೆಲ್ಲರಿಗೂ ತಾಯಿಯಂತಿದ್ದರು. ಅವರು ಗೌರವಾನ್ವಿತ ರಾಜಕಾರಣಿ, ಅದ್ಭುತ ವಾಗ್ಮಿ ಮತ್ತು ತುಂಬಾ ಪ್ರೀತಿಯುಳ್ಳವರು, ಕರುಣಾಮಯಿಯಾಗಿದ್ದರು.  ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ’  ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: