ಪ್ರಮುಖ ಸುದ್ದಿಮೈಸೂರು

ಆ.9ರಿಂದ ಜೆಎಸ್ಎಸ್ ನಿಂದ ‘ಮನಸ್ಸು – ಲೈಂಗಿಕತೆ’ ಶೈಕ್ಷಣಿಕ ಕಾರ್ಯಾಗಾರ

ಮೈಸೂರು,ಆ.7 ಭಾರತೀಯ ಮನೋ ವೈದ್ಯಕೀಯ ಸಂಗದ ಉಪ ವಿಭಾಗದ ಆಶ್ರಯದಲ್ಲಿ ಆ. 9 ರಿಂದ 11ರವರೆಗೆ ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ತಜ್ಞರಿಗಾಗಿ ಮನಸ್ಸು ಮತ್ತು ಲೈಂಗಿಕತೆ ಕುರಿತ  ಮುಂದುವರಿದ ಕಲಿಕಾ ಶಿಕ್ಷಣ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಡಾ.ಕೆ. ಸತ್ಯನಾರಾಯಣರಾವ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.9 ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸದ ಪ್ರತಾಪ್‌ಸಿಂಹ, ರಾಜವಂಶಸ್ಥ ಯದುವೀರ್ ಒಡೆಯರ್ ಇನ್ನಿತರರು ಉದ್ಘಾಟಿಸುವರು.

ಮೂರೂ ದಿನಗಳ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತಜ್ಞರು ಪಾಲ್ಗೊಳ್ಳಲಿದ್ದು, ಲೈಂಗಿಕತೆ ಕುರಿತಂತೆ ತಜ್ಞರಲ್ಲಿಯೂ ಇರಬಹುದಾದ ತಪ್ಪು ತಿಳಿವಳಿಕೆ ಹೋಗಲಾಡಿಸಿ, ವೈಜ್ಞಾನಿಕ ಅಂಶಗಳನ್ನು ವಿವರಿಸಲಿದ್ದಾರೆ.

ಇದೇ ವೇಳೆ, ಲೈಂಗಿಕತೆ ಕುರಿತಂತೆ ಇರುವ ಸಾವಿರಾರು ಪುಸ್ತಕಗಳ ಪ್ರದರ್ಶನ ಸಹಾ ನಡೆಯಲಿದೆ ಎಂದು ಹೇಳಿದರು.

ಡಾ. ಘೋರಿ ಸಲಾವುದ್ದೀನ್ ಖಾನ್ ಘೋರಿ, ಡಾ. ಶಿವಾನಂದ ಮನೋಹರ್, ಡಾ.ಎಂ. ಕಿಶೋರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: