
ಪ್ರಮುಖ ಸುದ್ದಿ
ಮಡಿಕೇರಿಯಲ್ಲಿ ಭಾರೀ ಮಳೆ : ಕೆಆರ್ ಎಸ್ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ 22719 ಕ್ಯೂಸೆಕ್ಗೆ ಏರಿಕೆ
ರಾಜ್ಯ(ಮಂಡ್ಯ)ಆ.7:- ಮಡಿಕೇರಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕೆಆರ್ ಎಸ್ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ 22719 ಕ್ಯೂಸೆಕ್ಗೆ ಏರಿಕೆಯಾಗಿದೆ.
ಮಂಗಳವಾರ ಸಂಜೆ ವೇಳೆಗೆ 17,745 ಕ್ಯೂಸೆಕ್ ನೀರಿನ ಪ್ರಮಾಣ ರಾತ್ರಿ ಹೆಚ್ಚಳವಾಗಿದ್ದು, ಬೆಳಿಗ್ಗೆ 22719 ಬರುತ್ತಿದೆ. ಆ ಮೂಲಕ ಕೇವಲ 12 ಗಂಟೆ ಅವಧಿಯಲ್ಲಿ 1.5 ಅಡಿ ನೀರು ಶೇಖರಣೆಯಾಗಿದೆ. ಮಂಗಳವಾರ ಸಂಜೆ 85.20 ಅಡಿ ಇದ್ದ ನೀರಿನ ಮಟ್ಟ ಬೆಳಗ್ಗೆ 86.90 ಅಡಿಯಾಗಿದೆ.
ಮಳೆಯಬ್ಬರ ಮುಂದುವರಿದಿದ್ದು, ಸಂಜೆ ವೇಳೆಗೆ ಒಳಹರಿವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.(ಕೆ.ಎಸ್,ಎಸ್.ಎಚ್)