ಮೈಸೂರು

ಮಾಜಿ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರಿಗೆ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸಂತಾಪ

ಮೈಸೂರು,ಆ.7:- ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಹಿರಿಯ ಬ್ರಾಹ್ಮಣ ಮುಖಂಡರಾದ ಹಾಗೂ ಮಾಜಿ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಅವರಿಗೆ ಸಂತಾಪ ಸಲ್ಲಿಸಲಾಗಿದೆ.

ಸಂತಾಪ ಸಲ್ಲಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್   ಅತೀ ಸಂತೋಷದ ಹಿಂದೆ ದುಃಖವೂ ಇರುತ್ತದೆ ಅನ್ನುವುದಕ್ಕೆ ಉದಾಹರಣೆ ಮೊನ್ನೆಯ ದಿವಸ ಆರ್ಟಿಕಲ್ 370 ರದ್ಧತಿಯಿಂದ ಖುಷಿಯಲ್ಲಿದ್ದವರಿಗೆ ಈ ದಿವಸ ಸುಷ್ಮಾಜೀ ಯವರ ಸಾವು ದುಃಖ ನೀಡಿದೆ.  ಇದನ್ನೇ ವಿಧಿಯ ಆಟ ಅನ್ನುವುದು , ವಿಧಿಯ ಆಟವನ್ನು ನಾವುಗಳು ಕೈ ಕಟ್ಟಿ ನೋಡಬೇಕಷ್ಟೇ , ಸುಷ್ಮಾ ಜೀ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೊಮ್ಮೆ ಅವರ ಜನನ ಹಿಂದೂಸ್ಥಾನದಲ್ಲಿಯೇ ಆಗಲಿ . ಸುಷ್ಮಾ ಜೀ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಅದೇ ಶಕ್ತಿ, ಅದೇ ದೇಶ ಭಕ್ತಿ , ಅದೇ ಧೈರ್ಯ ದಿಟ್ಟ ಮಹಿಳೆಯಾಗಿ ಮತ್ತೆ ಹುಟ್ಟಿ ಬನ್ನಿ ಮೇಡಂ ಓಂ ಶಾತಿ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: