ಮೈಸೂರು

ಸರ್ಕಾರದ ಆಯವ್ಯಯ ಕೈಗಾರಿಕೆಗಳ ಅನುದಾನ ಮೀಸಲಾತಿಗೆ ಆಗ್ರಹ

ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಬಾಕಿ ಇರುವ ಕೈಗಾರಿಕಾ ಸಹಾಯಧನ ಬಿಡುಗಡೆಗೆ ಅನುದಾನವನ್ನು ಮೀಸಲಿರಿಸಲು ಈಚೆಗೆ ಜರುಗಿದ ಮೈಸೂರು ಕೈಗಾರಿಕೆಗಳ ಸಂಘದ ಸಭೆಯಲ್ಲಿ ಒಕ್ಕೊರಲಿನಲ್ಲಿ ನಿರ್ಣಯಿಸಲಾಯಿತು.

ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಾಗೂ ಶಾಸಕ ವಾಸು ನೇತೃತ್ವದಲ್ಲಿ ನಡೆದ ಸಭೆಯಲ್ಲಿ  2015-16ನೇ ಸಾಲಿನ ಸಹಾಯಧನ ಬಿಡುಗಡೆಗೆ ಸರ್ಕಾರವನ್ನು ಅಭಿನಂದಿಸಲಾಯಿತು. ಅಲ್ಲದೇ ಇತಿಹಾಸದಲ್ಲಿಯೇ ಸಹಾಯ ಧನವನ್ನು ಬಾಕಿ ಇಲ್ಲದಂತೆ ಬಿಡುಗಡೆಗೊಳಿಸುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಸಂಸ್ಥೆಯೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು.

ಬೇಡಿಕೆಗಳು :  ಸಹಾಯ ಧನವನ್ನು ಆಯಾ ವರ್ಷಕ್ಕೆ ಅನುಗುಣವಾಗುವಂತೆ ಬಿಡುಗಡೆಗೊಳಿಸಬೇಕೆಂದು ಕೋರಿದರು.

ಪರಿಶಿಷ್ಟ,ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಮೊದಲ ಪೀಳಿಗೆಯ ಉದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ರಿಯಾಯಿತಿ ಬಡ್ಡಿ ದರದ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಲಭಿಸುವಂತೆ ಮನವಿ ಮಾಡಿದರು.

ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆ ಪೂರೈಕೆ, ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು, ಪ್ರತ್ಯೇಕ ಹೆಲಿಪ್ಯಾಡ್, ಕ್ಲಸ್ಟರ್ ಅಭಿವೃದ್ಧಿ, ಕೈಗಾರಿಕಾ ಪ್ರದೇಶದಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆ, ಸಣ್ಣ ನೀವೇಶನ ಅಭಿವೃದ್ಧಿ, ಸಕಾಲ ವ್ಯಾಪ್ತಿಗೆ ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿಯನ್ನು ಒಳಪಡಿಸಲು, ಕೈಗಾರಿಕಾ ಪ್ರದೇಶದ ಕರೆ ರಕ್ಷಣೆ, ಆರು ತಿಂಗಳಿಗೊಮ್ಮೆ ಮೈಸೂರಿನಲ್ಲಿ ಕೈಗಾರಿಕಾ ಅದಾಲತ್‍ ನಡೆಸಬೇಕು. ಘನತ್ಯಾಜ್ಯ ಸಂಗ್ರಹ, ರೋಗಗ್ರಸ್ತ ಕೈಗಾರಿಕೆಗಳ ಪುನಶ್ಚೇತನಕ್ಕೆ ಉತ್ತೇಜನ ಸೇರಿದಂತೆ ಸುಸಜ್ಜಿತ ರಫ್ತು ಕೇಂದ್ರ ಸ್ಥಾಪನೆಗಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್, ಮಾಜಿ ಮಹಾಪೌರ ಪಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಎನ್.ಸತೀಶ್, ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಅಲ್ಯುಮೀನಿಯಂ ಪಾತ್ರೆ ತಯಾರಕರ ಸಂಘದ ಕಾರ್ಯದರ್ಶಿ ಎಸ್.ವಿ.ಸಂಪತ್ ಕುಮಾರ್, ಮಹಿಳಾ ಉದ್ಯಮಿ ಶಾಂತ ಬಿ,ರವಿ ಬೈರೇಗೌಡ, ಪ್ರಕಾಶ್ ಪುಟ್ಟಸ್ವಾಮಿ, ಕೈಗಾರಿಕೆಗಳ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶಿವಣ್ಣ ಮತ್ತಿತ್ತರು ಸಭೆಯಲ್ಲಿ ಪಾಲ್ಗೊಂಡು ನಿರ್ಣಯಕ್ಕೆ ಸಮ್ಮತಿ ಸೂಚಿಸಿದರು.

Leave a Reply

comments

Related Articles

error: