ಮೈಸೂರು

ಶೆಡ್ ನಲ್ಲಿ ಕಟ್ಟಿದ್ದ ಕುರಿಗಳನ್ನು ಕದ್ದೊಯ್ದ ಕಳ್ಳರು

ಮೈಸೂರು,ಆ.8:-ಶೆಡ್ ನಲ್ಲಿ ಕಟ್ಟಿದ್ದ ಕುರಿಗಳನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ಕೆಇಬಿ ಕಾಲೋನಿಯಲ್ಲಿ ನಡೆದಿದ್ದು, ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್ ರಸೂಲ್, #17, 08 ನೇ ಕ್ರಾಸ್, ಅಬ್ದುಲ್ ರೆಹಮಾನ್ ರಸ್ತೆ, ಕೆ ಇ ಬಿ ಕಾಲೋನಿ ಎಂಬವರು ಉದ್ಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,  ಬಕ್ರೀದ್ ಹಬ್ಬದ ಪ್ರಯುಕ್ತ  ಕೆಲವರು ಕುರಿಗಳನ್ನು ಖರೀದಿಸಿ ಹಬ್ಬದವರೆಗೆ ನೋಡಿಕೊಳ್ಳಲು ಒಂದು ದಿನಕ್ಕೆ 100ರೂ.ಗಳಂತೆ ನನ್ನ ಬಳಿ ಬಿಟ್ಟಿದ್ದು,  03/08/2019 ರಂದು   ರಾತ್ರಿ 3 ಗಂಟೆಯವರೆಗೂ ಶೆಡ್ ನಲ್ಲಿ ಕಟ್ಟಿಹಾಕಿದ್ದ ಕುರಿಗಳನ್ನು ನೋಡಿ ನಂತರ ಮಲಗಿದ್ದೆ. ಬೆಳಿಗ್ಗೆ 6.30ರ ಸುಮಾರಿಗೆ ಎದ್ದು ನೋಡಲಾಗಿ 5 ಕುರಿಗಳು ಇರಲಿಲ್ಲ. ಎಲ್ಲಾ ಕಡೆ ವಿಚಾರ ಮಾಡಲಾಗಿ ಪತ್ತೆಯಾಗಿಲ್ಲ. ಐದು ಕುರಿಗಳ ಬೆಲೆ ಸುಮಾರು 48,000 ರೂ. ಆಗಿರುತ್ತದೆ. ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಂಡು ಕಳ್ಳತನ ಆಗಿರುವ ಕುರಿಗಳನ್ನು ವಾಪಸ್ ಕೊಡಿಸಿಕೊಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: