ಕರ್ನಾಟಕದೇಶಪ್ರಮುಖ ಸುದ್ದಿ

ಕಾವೇರಿ ವಿವಾದ: ದೆಹಲಿ ತಲುಪಿದ ಕರ್ನಾಟಕ ಪ್ರತಿನಿಧಿಗಳು; ಎಲ್ಲರ ಚಿತ್ತ ದೆಹಲಿಯತ್ತ

ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಶುಕ್ರವಾರ ಅಂಗೀಕಾರ ಪಡೆದ ನಿಲುವಳಿಯ ಕುರಿತು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರ ಜೊತೆ ಚರ್ಚಿಸಲು ರಾಜ್ಯ ಸರ್ಕಾರದ ಪ್ರತಿನಿಧಿಗಳು ಶನಿವಾರ ನವದೆಹಲಿ ತಲುಪಿದ್ದಾರೆ.

ಕರ್ನಾಟಕ ಜನತೆಗೆ ಕುಡಿಯುವ ನೀರಿಗೂ ತತ್ವಾರವಿರುವ ಸಂದರ್ಭದಲ್ಲಿ ತಮಿಳುನಾಡಿಗೆ 3ನೇ ಬೆಳೆ ಬೆಳೆಯಲು ನೀರು ಕೊಡುವುದು ದುಸ್ತರ ಎಂಬುದು ನಿರ್ಣಯದ ಸಾರಾಂಶವಾಗಿದ್ದು, ಈ ಕುರಿತು ಮುಂದೆ ಉದ್ಭವಿಸಬಹುದಾದ ಕಾನೂನಾತ್ಮಕ ತೊಡಕುಗಳ ಕುರಿತು ಅಧಿಕಾರಿಗಳು ಚರ್ಚಿಸಲಿದ್ದಾರೆ.

ಕರ್ನಾಟಕ ಸರ್ಕಾರಕ್ಕೆ ನ್ಯಾಯಂಗ ನಿಂದನೆಯ ಸವಾಲು ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಈ ಭೇಟಿ ಮಹತ್ವ ಪಡೆದಿದೆ.

ಕರ್ನಾಟಕಕ್ಕೆ ಮಾರಕವಾಗುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಅನುಷ್ಠಾನ ಸಾಧ್ಯವಿಲ್ಲವೆಂಬ ನಿರ್ಣಯದಿಂದ ನ್ಯಾಯಂಗ ನಿಂದನೆ ಆಗುವುದಿಲ್ಲ ಎಂಬುದು ಕರ್ನಾಟಕ ಸರ್ಕಾರದ ಮತ್ತು ರಾಜಕೀಯ ಮುಖಂಡರ ಅಭಿಪ್ರಾಯವಾಗಿದ್ದು, ದೇಶದ ಸರ್ವೋಚ್ಚ ನ್ಯಾಯಲಯಕ್ಕೆ ಈ ಕುರಿತು ಮನವರಿಕೆ ಮಾಡಿಕೊಡಬೇಕಾದ ಬಹುದೊಡ್ಡ ಜವಾಬ್ದಾರಿ ಕರ್ನಾಟಕದ ಪರ ವಕೀಲರಾದ ಫಾಲಿ ಎಸ್. ನಾರಿಮನ್ ಅವರ ಮುಂದಿದೆ.

ಕರ್ನಾಟಕ ವಿಧಾನಮಂಡಲದ ಉಭಯ ಸದನಗಳು ಅಂಗೀಕರಿಸಿದ ನಿಲುವಳಿಯು ಶುಕ್ರವಾದ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಅಂತಾರಾಜ್ಯ ವಿವಾದಗಳಿಗೆ ಸಂಬಂಧಿಸಿದಂತೆ ಇದು ಅಪರೂಪದ ಪ್ರಕರಣವಾಗಿದ್ದು, ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವು ಪಕ್ಷಪಾತದಿಂದ ಕೂಡಿದ ತೀರ್ಪು ನೀಡಿದೆ ಎನ್ನುವ ಆರೋಪಗಳು ಎಲ್ಲೆಡೆ ದೇಶದ ಹಲವು ಹಿರಿಯ ಕಾನೂನು ತಜ್ಞರಿಂದ ಕೇಳಿಬಂದಿವೆ.

ತಮ್ಮ ಮೇಲೆ ಬಂದ ಆರೋಪಗಳನ್ನು ಸುಪ್ರೀಂ ನ್ಯಾಯಾಧೀಶರು ಹೇಗೆ ಸ್ವೀಕರಿಸುವರು? ಸಾವಧಾನದಿಂದ ವಾಸ್ತವ ನೆಲೆಗಟ್ಟು ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸವರೇ? ಸ್ವಪ್ರತಿಷ್ಠೆ ಮೆರೆದು ವ್ಯಘ್ಯರಾಗುವರೇ? ಕೇಂದ್ರದ ಬಿಜೆಪಿ ಸರ್ಕಾರದ ನಿಲುವೇನು? ಸುಪ್ರೀಂ ನ್ಯಾಯಾಧೀಶರು ತೀರ್ಪಿನ ಆದೇಶ ಓದುವಾಗ ತಮ್ಮ ಅನುಭವವನ್ನೆಲ್ಲಾ ಬಳಸಿ ಭಾವಾವೇಶದಿಂದ ವಾದ ಮಂಡಿಸಿದ್ದ ಹಿರಿಯ ವಕೀಲ ಫಾಲಿ ನಾರಿಮನ್ ಅವರ ತಂತ್ರಗಾರಿಕೆ ಏನಿರಬಹುದು ಎಂಬ ಅನೇಕಾನೇಕ ಕುತೂಹಲಗಳು ದೇಶದ ಕಾನೂನು ಮತ್ತು ರಾಜಕೀಯ ತಜ್ಞರ ತಲೆಯಲ್ಲಿ ಸುಳಿದಾಡುತ್ತಿವೆ.

Leave a Reply

comments

Tags

Related Articles

error: