ಮೈಸೂರು

ರಸ್ತೆಯಲ್ಲಿ ಸಿಕ್ಕ ಭಾರೀ ಮೊತ್ತದ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕ್ಯಾಶಿಯರ್ ಎಸ್.ರಾಘವೇಂದ್ರ ಅವರನ್ನು ಅಭಿನಂದಿಸಿದ ಸತ್ಯಮೇವ ಜಯತೆ ಸಂಘಟನೆ

ಮೈಸೂರು,ಆ.8:- ರಸ್ತೆಯಲ್ಲಿ ಸಿಕ್ಕ ಭಾರೀ ಮೊತ್ತದ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ  ಮೈಸೂರಿನ ಎಸ್.ಬಿ.ಐ ಬ್ಯಾಂಕ್, ಮಿನಿ ವಿಧಾನ ಸೌಧ ಬ್ರಾಂಚಿನ ಕ್ಯಾಶಿಯರ್ ಎಸ್.ರಾಘವೇಂದ್ರ ಅವರನ್ನು  ಕೆ ಆರ್   ಮೊಹಲ್ಲಾ ದಲ್ಲಿರುವ ಅವರ ನಿವಾಸದಲ್ಲಿ  ಮೈಸೂರಿನ ಜನತೆ ಪರವಾಗಿ ಸತ್ಯಮೇವ ಜಯತೆ ಸಂಘಟನೆ ವತಿಯಿಂದ ಮೈಸೂರು ಪೇಟ ಹಾಗೂ ಶಾಲು ಹೊದೆಸಿ ಅಭಿನಂದಿಸಲಾಯಿತು.

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಲಾಗಿದ್ದು,   ಇತ್ತೀಚೆಗೆ ಹೊರ ರಾಜ್ಯದ ವ್ಯಕ್ತಿಯೊಬ್ಬರು   ಹಣ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ  ಎಸ್.ರಾಘವೇಂದ್ರ ಹಾಗೂ ಅವರ ಸುಪುತ್ರ ವಿದ್ಯಾವರ್ಧಕ ಎಂಜಿನಿಯರಿಂಗ್  ಕಾಲೇಜಿನ ವಿದ್ಯಾರ್ಥಿ ಆರ್ ಅನಿರುದ್ಧ ಎಂಬವರು  ಕಳೆದುಕೊಂಡವರಿಗೆ ಹಣ ತಲುಪಿಸಿ ಸಾರ್ವಜನಿಕರ ಕಣ್ಣಿಗೆ ಪ್ರಾಮಾಣಿಕರೆಂದು ಬಿಂಬಿತವಾಗಿದ್ದಾರೆ. ಮೈಸೂರಿನ ಸುತ್ತಮುತ್ತಲು ನಡೆಯುತ್ತಿರುವ ಸರಗಳ್ಳತನ,ದರೋಡೆ, ಮೋಸ, ಕಳ್ಳತನ ವಿಷಯವನ್ನು ಕೇಳಿ ಯಾರನ್ನೂ ನಂಬದಂತಹ ಪರಿಸ್ಥಿತಿಯಲ್ಲಿ ಇದ್ದ ಜನರಿಗೆ ಸಿಕ್ಕ ಹಣ ನೀಡಿ ಇನ್ನೂ ಪ್ರಾಮಾಣಿಕರ ಸಂಖ್ಯೆ ಕಡಿಮೆ ಆಗಿಲ್ಲ ಎಂದು ತೋರಿಸಿದ್ದಾರೆ. ಇಂದಿನ ಯುವ ಪೀಳಿಗೆಗೆ ಘಟನೆ  ಒಂದು ಮಾರ್ಗದರ್ಶನವಾಗಿದ್ದು ಪರರ ದುಡ್ಡು ಪಾಷಾಣಕ್ಕೆ ಸಮಾನ ಎಂದು ಅರಿತುಕೊಳ್ಳಬೇಕು ಎಂದು ಮಾಜಿ ನಗರಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರಥಿ ತಿಳಿಸಿದರು.

ಈ ಸಂದರ್ಭ ಸತ್ಯ ಮೇವ ಜಯತೇ ಸಂಘಟನೆಯ ಅಧ್ಯಕ್ಷರಾದ ಶ್ರೀನಿವಾಸ್ ರಾಕೇಶ್ ,ಉದ್ಯಮಿ ಅಪೂರ್ವ ಸುರೇಶ್ ಯುವ ಮುಖಂಡರಾದ ಜಿ. ರಾಘವೇಂದ್ರ ,ಹರೀಶ್ ನಾಯ್ಡು, ಅಶೋಕ್ ,ಚಕ್ರಪಾಣಿ ,ಹಾಗೂ ಮೊಹಲ್ಲಾ ನಿವಾಸಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: