ಪ್ರಮುಖ ಸುದ್ದಿಮೈಸೂರು

ಕಬಿನಿಯಲ್ಲಿ 80ಸಾವಿರ ಕ್ಯೂಸೆಕ್ ಹೊರಹರಿವು : ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ : ಗಂಜಿ ಕೇಂದ್ರ ಪ್ರಾರಂಭಕ್ಕೆ ಸೂಚನೆ ;ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು,ಆ.8:-    ಕೇರಳದ ವಯನಾಡಿನಲ್ಲಿ  ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿರುವ ಕಬಿನಿ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಇಂದು ಬೆಳಿಗ್ಗೆ ಕಬಿನಿಯಲ್ಲಿ 80ಸಾವಿರ ಕ್ಯೂಸೆಕ್ ಹೊರಹರಿವು ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅವರಿಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸುದೀರ್ಘವಾಗಿ ಭಾರೀ ಮಳೆ ಆಗಿರುವುದರಿಮದ ಕಬಿನಿ ಜಲಾಶಯದ ಒಳಹರಿವು ಹೆಚ್ಚಿದೆ.  ಇಂದು ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗ 60ಸಾವಿರ ಕ್ಯೂಸೆಕ್ ಹೊರಹರಿವಿದ್ದು, ಈಗ 20ನಿಮಿಷಗಳ ನಂತರ 80ಸಾವಿರ ಕ್ಯೂಸೆಕ್ ಹೊರಹರಿವಿದೆ ಎಂದು ತಿಳಿದು ಬಂದಿದೆ ಎಂದರು. ಕಳೆದ ವರ್ಷ ಕೂಡ ಇದೇ ಅವಧಿಯಲ್ಲಿ ಕೊಡಗು-ಕೇರಳ ಪ್ರವಾಹದಿಂದ ವಯನಾಡಿನಲ್ಲಿ ಹೆಚ್ಚು ಮಳೆಯಾದ ಕಾರಣ 85ಸಾವಿರ ಕ್ಯೂಸೆಕ್ ಹೊರಹರಿವು ಮಾಡಲಾಗಿತ್ತು. ಅದರಿಂದ ಕೃಷಿ ನಾಶವಾಗಲಿದ್ದು, ಮುಳುಗಡೆಯಾಗಲಿದೆ. ಎಚ್ಚರವಹಿಸಬೇಕು ಎಂದು ಹೇಳಿದ್ದೇವೆ. ನಂಜನಗೂಡು ದಾಟಿ ಹೋಗಲು ನಾಲ್ಕು ಗಂಟೆ ಬೇಕು. ಇನ್ನೂ ಸಮಯವಿದ್ದು ಜನರ ಸುರಕ್ಷತೆಗೆ ಸಹಕರಿಸಿ ಎಂದರು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಕೆ, ಅಗ್ನಿಶಾಮಕ ದಳ ತೋಟಗಾರಿಕಾ ಇಲಾಖೆ ಎಲ್ಲವೂ ಸಹಕರಿಸಲಿದ್ದು, ಎಲ್ಲರಿಗೂ ಸೂಚನೆ ನೀಡಿದ್ದೇನೆ ಎಂದರು. ಕಬಿನಿಯಲ್ಲಿ ಸದ್ಯಕ್ಕೆ 55ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಇನ್ನೂ ಹೆಚ್ಚಾಗಲಿದೆ ಎಂದಿದ್ದಾರೆ. ಹಾರಂಗಿಯಲ್ಲಿ 45ಸಾವಿರ ಕ್ಯೂಸೆಕ್ ಒಳಹರಿವಿದೆ. ಇದು ಪಿರಿಯಾಪಟ್ಟಣ, ಕೆ.ಆರ್.ನಗರಕ್ಕೆ ಎಫೆಕ್ಟ್ ಆಗಲಿದೆ. ಎರಡೂ ಕಡೆಯು ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಪರಿಹಾರ ವ್ಯವಸ್ಥೆ ಮಾಡಲಿದ್ದೇವೆ. ಗಂಜಿಕೇಂದ್ರ ಕೂಡ ಪ್ರಾಂಭಿಸಲು ಸೂಚನೆ ನೀಡಿದ್ದೇನೆ ಎಮದು ತಿಳಿಸಿದರು. ವರಮಹಾಲಕ್ಷ್ಮಿ ಹಬ್ಬವಿದ್ದು, ಎರಡು ದಿನ ರಜೆ ಇರುವ ಕಾರಣ ಪ್ರವಾಸಿಗರು ಬರಬಹುದು. ಯಾರೂ ಕೂಡ ನೀರಿಗಿಳಿಯದಂತೆ ಎಚ್ಚರಿಕೆ ನೀಡಿ. ನಂಜನಗೂಡು ದೇವಸ್ಥಾನದ ಸುತ್ತಮುತ್ತ ನೀರು ನುಗ್ಗುವ ಸಾಧ್ಯತೆಯಿದೆ. ಸೂಚನೆ ನೀಡಿದ್ದೇನೆ. ನಂಜನಗೂಡು ಪಟ್ಟಣ, ಹಳೇ ಬೀದಿಯಲ್ಲಿಯೂ ಕ್ರಮಕ್ಕೆ ಸೂಚಿಸಿದ್ದೇನೆ. ಸುತ್ತೂರು ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆಯಿದೆ. ತುಂಬುಸೋಗೆ ಸೇರಿದಂತೆ, ಹಲವು ಕಡೆ ನೀರು ತುಂಬಬಬಹುದು, ಜಾಸ್ತಿ ನಿಗಾ ವಹಿಸಿ, ಜನರಿಗೆ ಪ್ರವಾಹದ ಮುನ್ಸೂಚನೆ ಇರುವ ಕಡೆ ಹೋಗದಂತೆ ರಿಕ್ಷಾ, ಜೀಪ್ ನಲ್ಲಿ ಮೈಕ್ ಅಳವಡಿಸಿ ಪಿಡಿಒ ಮತ್ತು ಗ್ರಾಮಲೆಕ್ಕಿಗರಿಗೆ ಪ್ರಚಾರ ಆರಂಭಿಸಲು ಸೂಚನೆ ನೀಡಿದ್ದೇನೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬ್ಯಾನರ್ ಅಳವಡಿಸಲು ತಿಳಿಸಿದ್ದೇನೆ ಎಂದು ತಿಳಿಸಿದರು.

ಸುತ್ತ ಮುತ್ತಲಿನ ಜನರಿಗೆ ಸ್ಥಳದಿಂದ ಸುರಕ್ಷಿತ ಸ್ಥಳಗಳ ಕಡೆ  ಹೊರಡುವಂತೆ ಸೂಚನೆ ನೀಡಿದ್ದೇನೆ. ಎಲ್ಲಾ ತಾಲೂಕುಗಳಿಗೆ ಹೈ ಅಲರ್ಟ್ ಘೋಷಿಸಿದ್ದೇನೆ. ಮಳೆ ಹಿನ್ನಲೆ ಶಾಲಾ ಕಾಲೇಜು ರಜೆ ಘೋಷಣೆ ಮಾಡಲಾಗಿದೆ.  ವಸತಿ,ಊಟ, ಸ್ವೇಟರ್,ಛತ್ರಿ ಸೇರಿದಂತೆ ಜನರಿಗೆ ಅಗತ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ನಾಲ್ಕು ಬೋಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ  ಗುಂಡ್ಲುಪೇಟೆ ರಸ್ತೆ ಸಂಚಾರ ಬದಲಾವಣೆಗೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳಲ್ಲಿ ಅಗತ್ಯವಾದ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ರೇನ್ ಕೋಟ್, ಜಾಕೇಟ್ ಗಳನ್ನು ನೀಡಲಾಗಿದೆ. ಜನರ ಸುರಕ್ಷತೆಗಾಗಿ ಹೆಚ್ಚುವರಿ ಹೋಂ ಗಾರ್ಡ್ ಹಾಕಲಾಗಿದೆ. ನಂಜನಗೂಡು ದೇವಸ್ಥಾನಕ್ಕೆ ಹೆಚ್ಚು ಜನ ಆಗಮನ ಹಿನ್ನಲೆ. ಹೆಚ್ಚು ಜನ ದೇವಸ್ಥಾನಕ್ಕೆ ಹೋಗದಂತೆ ಕಮೀಷನರ್ ಮನವಿ ಮಾಡಿದ್ದಾರೆ. ನೀರಿನ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಸೆಲ್ಫೀ ತೆಗೆದುಕೊಳ್ಳಲು ಮುಂದಾದರೇ ಅಪಾಯಯಾಗಬಹುದು. ಯಾರು ನದಿ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳಬಾರದು. ತುಂಬಿದ ಸೇತುವೆ ಮೇಲೆ ಹುಡುಗರು ಈಜಲು ಮುಂದಾಗುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಹಾಗೂ ಈಜುಗಾರರನ್ನ ನೇಮಿಸಲು ಮುಂದಾಗುತ್ತೇವೆ ಎಂದರು.

ಈ ಸಂದರ್ಭ ಅಗ್ನಿಶಾಮಕ ಅಧಿಕಾರಿ ಈಶ್ವರ್ ನಾಯಕ್ ಉಪಸ್ಥಿತರಿದ್ದರು.

ಸಹಾಯಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕಂಟ್ರೋಲ್ ರೂಂಗಳಾದ ಜಿಲ್ಲಾಧಿಕಾರಿ ಕಛೇರಿ 0821-2423800/1077, ತಾಲೂಕು ಕಛೇರಿ ಮೈಸೂರು 0821-2414812, ನಂಜನಗೂಡು ತಾಲೂಕು 08221-223108, ತಿ.ನರಸೀಪುರ 08227-260210/631911901, ಹುಣಸೂರು 08222-252040, ಕೆ.ಆರ್.ನಗರ 08223-262371, ಹೆಚ್.ಡಿ.ಕೋಟೆ 08228-255325, ಪಿರಿಯಾಪಟ್ಟಣ 08223-274007, ಚೆಸ್ಕಾಂ ಮೈಸೂರು 0821-2461030/1912, ಅಗ್ನಿಶಾಮಕ ಇಲಾಖೆ 0821-2540970 ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: