ಮೈಸೂರು

ಪ್ರಪಂಚದ ಅತಿ ದೊಡ್ಡ ಧರ್ಮ ಪ್ರೀತಿ ಅದನ್ನು ಎಲ್ಲರೂ ಗೌರವಿಸಿ : ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

ಮೈಸೂರು,ಆ.8:- ಮೈಸೂರಿನಲ್ಲಿ ಶ್ರೀ ಕೃಷ್ಣ ಜನ್ಮ ಪ್ರತಿಷ್ಠಾನ ಪೂಜಾ ಮತ್ತು ಗಣಪತಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಉದಯಗಿರಿಯಲ್ಲಿರು  ವಿಘ್ನೇಶ್ವರ ಪ್ರಸನ್ನ ಭಕ್ತ ಮಂಡಲಿ ನಡೆಸಿದೆ.

ಕಾರ್ಯಕ್ರಮವನ್ನು ಮನಪಾ ಮೇಯರ್ ಪುಷ್ಪಲತಾ ಜಗನ್ನಾಥ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ನಾವು ಗುಡಿಗೋಪುರಗಳನ್ನು ಕಟ್ಟುವುದಕ್ಕಿಂತ ಭಾವನೆಗಳನ್ನು ಕಟ್ಟಬೇಕು. ಈ ದೇವಾಲಯಗಳು ಎನ್ನುವುದು ಈಗ ಕೇವಲ ಹಣ ಮಾಡುವ ಕೇಂದ್ರಗಳಾಗಿವೆ. ಇದು ಈಗ ಅನಿವಾರ್ಯವಾಗಿದೆ. ದೇವಾಲಯಗಳು ಒಂದು ಧಾರ್ಮಿಕ ಕೇಂದ್ರಗಳಾಗಿ ಇರಬೇಕು. ನೀವು ಎಷ್ಟು ವರ್ಷ ಬದುಕುತ್ತೀರ ಎನ್ನುವುದು ಮುಖ್ಯವಲ್ಲ. ಇರುವವರೆಗೆ ಎಲ್ಲರನ್ನೂ ಪ್ರೀತಿಸಿ ಬದುಕಿ. ಪ್ರಪಂಚದ ಅತಿ ದೊಡ್ಡ ಧರ್ಮ ಪ್ರೀತಿ. ಅದನ್ನು ಎಲ್ಲರೂ ಗೌರವಿಸಿ ಎಂದರು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: