ಪ್ರಮುಖ ಸುದ್ದಿಮೈಸೂರು

ನಾವಿಕ 5ನೇ ವಿಶ್ವಕನ್ನಡ ಸಮ್ಮೇಳನ ಸಾಂಸ್ಕೃತಿಕ ರಾಯಭಾರಿಯಾಗಿ ವಿದುಷಿ ಯಮುನಾ ಶ‍್ರೀನಿಧಿ ಆಯ್ಕೆ

ಮೈಸೂರು. ಆ.8:ನಾರ್ತ್ ಅಮೇರಿಕಾ ವಿಶ್ವ ಕನ್ನಡಿಗರ ಆಗರ ಆಯೋಜಿಸಿರುವ ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನದ ಸಾಂಸ್ಕೃತಿಕ ರಾಯಭಾರಿಯಾಗಿ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ವಿದುಷಿ ಯಮುನಾ ಶ್ರೀನಿಧಿ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡ ಅವರು ಮೂಲತಃ ಮೈಸೂರಿನವರಾದ 17 ವರ್ಷಗಳ ಅಮೇರಿಕಾದಲ್ಲಿ ನೆಲೆಸಿ ಕನ್ನಡದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಾ ಸುಮಾರು 700 ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿರುವೆ. ನಂತರ ರಾಜ್ಯಕ್ಕೆ ಬಂದ ಮೇಲೆ ರಂಗಭೂಮಿ. ಹಿರಿ ಹಾಗೂ ಕಿರು ತೆರೆಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುತ್ತಿರುವೆ ಎಂದು ತಿಳಿಸಿದರು‌.

ನಾವಿಕಾ‌ ಸಮ್ಮೇಳನವು ಆ. 30 ರಿಂದ ಸೆ.1ರವರೆಗೆ ಅಮೇರಿಕಾದ ಸಿನ್ ಸಿನ್ಯಾಟಿ ನಗರದಲ್ಲಿ ನಡೆಯುವ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ತಮ್ಮನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದು. ಇದೇ ಸಂದರ್ಭದಲ್ಲಿ ಪ್ರಬಂಧ ಮಂಡಿಸುವೆ. ಕೃಷ್ಣೇಗೌಡ, ದುಂಡಿರಾಜು. ಮುಖ್ಯ ಮಂತ್ರಿ ಚಂದ್ರು, ಗಾಯಕರಾದ ರಾಜೇಶ್‌ಕೃಷ್ಣನ್, ಅನುರಾಧಭಟ್ ಸೇರಿದಂತೆ ರಾಜ್ಯದ ಸುಮಾರು 40 ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗುವರು ಎಂದು ತಿಳಿಸಿದರು ‌(ವರದಿ : ಕೆ.ಎಂ.ಆರ್)

Leave a Reply

comments

Related Articles

error: