ಮೈಸೂರು

ಭರದಿಂದ ಸಾಗಿದೆ ಕಪಿಲಾ ನದಿ ಸ್ವಚ್ಛಗೊಳಿಸುವ ಕಾರ್ಯ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಕಪಿಲಾ ನದಿಯನ್ನು  ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಶ್ರೀಕಂಠೇಶ್ವರ ದೇವಸ್ಥಾನದ ಸಮೀಪದಲ್ಲಿ ಹರಿಯುತ್ತಿರುವ ಕಪಿಲಾನದಿಯ ಸ್ನಾನ ಘಟ್ಟದಲ್ಲಿ ಸ್ವಚ್ಛತೆ ಕಾರ್ಯಭರದಿಂದ ಸಾಗಿದ್ದು, ನದಿಯಲ್ಲಿ ಬಿದ್ದಿದ್ದ ಬಟ್ಟೆಗಳು, ಕಸದ ರಾಶಿಯನ್ನು ಮೇಲಕ್ಕೆತ್ತಿ ಸ್ವಚ್ಛಗೊಳಿಸಲಾಗುತ್ತಿದೆ.ನಂಜನಗೂಡಿನ ವಿವಿಧ ಸಂಘ ಸಂಸ್ಥೆಗಳು  ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಕಪಿಲಾನದಿ ಸ್ವಚ್ಛತೆಗಾಗಿ ಪೊಲೀಸರು ಕೂಡಾ ಕೈಜೋಡಿಸಿದ್ದಾರೆ. 50 ಕ್ಕೂ ಹೆಚ್ಚು ಜನರು ನದಿಗಿಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕಸಕಡ್ಡಿಗಳು, ಬಟ್ಟೆಗಳ ರಾಶಿಯಿಂದ ಮಲೀನವಾಗಿದ್ದ ಕಪಿಲಾ ಸ್ವಚ್ಛಗೊಂಡು ಶಾಂತತೆಯಿಂದ ಹರಿಯುತ್ತಿದ್ದಾಳೆ.

Leave a Reply

comments

Related Articles

error: