ಮೈಸೂರು

ವಾರ್ಡ್ ನಂ3-4ಕ್ಕೆ ಮಹಾಪೌರರ ಭೇಟಿ : ಸದಸ್ಯರ ಕಾರ್ಯಕ್ಕೆ ಶ್ಲಾಘನೆ

ಶುಕ್ರವಾರ ಬೆಳ್ಳಂಬೆಳಿಗ್ಗೆ ಮೈಸೂರು ಮಹಾನಗರಪಾಲಿಕೆಯ ಮಹಾಪೌರ ಎಂ.ಜೆ.ರವಿಕುಮಾರ್ ಅಗ್ರಹಾರದ ಸುತ್ತಮುತ್ತಲ ಅಂದರೆ ವಾರ್ಡ್ ನಂಬರ್ ಮೂರು ಮತ್ತು ನಾಲ್ಕಕ್ಕೆ ಭೇಟಿ ನೀಡಿ ಅಲ್ಲಿನ ಸದಸ್ಯರು ನಡೆಸಿದ  ಕಾರ್ಯಗಳನ್ನು ವೀಕ್ಷಿಸಿ ಶ್ಲಾಘಿಸಿದರು.

ನಗರಪಾಲಿಕೆ ವ್ಯಾಪ್ತಿಯ ಮೂರು ಮತ್ತು ನಾಲ್ಕನೇ ವಾರ್ಡ್ ನ ಅಗ್ರಹಾರವೃತ್ತದಿಂದ ರಾಮಾನುಜ ರಸ್ತೆ, ಚಾವಡಿಬೀದಿ, ಹಳೆಬಂಡಿಕೆರೆ, ಹೊಸಬಂಡಿಕೆರೆ, ವಿವಿಮಾರ್ಕೆಟ್, ತ್ಯಾಗರಾಜ ರಸ್ತೆಗಳಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ರಸ್ತೆ ಯಾವರೀತಿ ಇದೆ, ಜನರಿಗೆ ಏನಾದರೂ ತೊಂದರೆಯಾಗುತ್ತಿದೆಯೇ? ನೀರು ಯಾವ ರೀತಿ ಪೂರೈಕೆಯಾಗುತ್ತಿದೆ, ಕಸ ಸರಿಯಾದ ಸಮಯದಲ್ಲಿ ವಿಲೇವಾರಿ ಆಗುತ್ತಿದೆಯೋ ಇಲ್ಲವೋ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಿದರು.

ನಾಲ್ಕನೇ ವಾರ್ಡ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದನ್ನು ವೀಕ್ಷಿಸಿದರು. ಅಲ್ಲಿನ ರಸ್ತೆಗಳಿಗೆ ಸದಸ್ಯ ಸುನಿಲ್ 40ಲಕ್ಷರೂ.ವೆಚ್ಚ ಮಾಡಿ ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರಲ್ಲದೇ ಸುನಿಲ್ ಅವರಿಗೆ ಶಹಬ್ಬಾಸ್ ಗಿರಿಯನ್ನು ನೀಡಿದರು. ಎಲ್ಲ ಕಡೆ ಡ್ರೈನೇಜ್ ಗಳಿಗೆ ಪ್ಲಾಸ್ಟರ್ ಗಳನ್ನು ಹಾಕಲಾಗುತ್ತದೆ ಅದರಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಲ್ಲಿ ಎಲ್ಲವನ್ನೂ ಕಿತ್ತು ಹಾಕಿ ರಿಪೇರಿ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ಸ್ಲ್ಯಾಬ್ ಅಳವಡಿಸಿರುವುದರಿಂದ ಏನಾದರೂ ಸಿಕ್ಕು ತೊಂದರೆಯಾಯಿತೆನ್ನುವ ಪ್ರಮೇಯವೇ ಇಲ್ಲ. ಇದನ್ನು ಆರಾಮವಾಗಿ ಎತ್ತಿಟ್ಟು ಸರಾಗವಾಗಿ ಸರಿಪಡಿಸಬಹುದು ಎಂದು ಸುನಿಲ್ ಮಹಾಪೌರರಿಗೆ ವಿವರಿಸಿದರು. ಇದಕ್ಕೂ ಮೆಚ್ಚುಗೆಯ ಮಾತುಗಳೇ ಸಿಕ್ಕವು. ಇಲ್ಲಿನ ಜನತೆಯನ್ನು   ನಿಮಗೇನಾದರೂ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದಾಗ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಾರ್ಪೋರೇಟ್ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ ಎನ್ನುವ ಉತ್ತರ ಬಂತು.

ನಾಲ್ಕನೇ ವಾರ್ಡ್ ನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಅದನ್ನೊಂದು ಒದಗಿಸಿ, ಹಾಗೇ ಈಶ್ವರನ ದೇವಸ್ಥಾನಕ್ಕೆ ಮೇಲ್ಛಾವಣಿ ಇಲ್ಲ ಅದನ್ನೂ ಮಾಡಿಸಿಕೊಡಬೇಕಿದೆ. ಅನಿಲ ಚಿತಾಗಾರವಿದ್ದು ಅದರ ಅಭಿವೃದ್ಧಿಯೂ ಆಗಬೇಕಿದೆ ಎಂದು ಸ್ಥಳೀಯರು ತಿಳಿಸಿದರು. ಇದಕ್ಕುತ್ತರಿಸಿದ ಮಹಾಪೌರರು ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಪಾಲಿಕೆ ಆಯುಕ್ತ ಜೆ.ಜಗದೀಶ್ ವಲಯ ಒಂದರ ಅಧಿಕಾರಿಗಳು ಮತ್ತು ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: