ಕ್ರೀಡೆಪ್ರಮುಖ ಸುದ್ದಿ

ಕಾಶ್ಮೀರದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲು ಚಿಂತನೆ ನಡೆಸಿದ್ದಾರಂತೆ ಮಹೇಂದ್ರ ಸಿಂಗ್ ಧೋನಿ

ದೇಶ(ನವದೆಹಲಿ)ಆ.9:- ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಸ್ತುತ ಕಾಶ್ಮೀರದಲ್ಲಿ ಸೇನೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ಕಾಶ್ಮೀರದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯಲು ಚಿಂತನೆ ನಡೆಸಿದ್ದಾರಂತೆ.

ಅವರು ಕ್ರಿಕೆಟ್ ಕುರಿತಂತೆ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದ್ದು,  ಕಾಶ್ಮೀರದ ಜನರಿಗಾಗಿ ಕ್ರಿಕೆಟ್ ಅಕಾಡೆಮಿ ತೆರೆಯಲು ಧೋನಿ ಯೋಚಿಸುತ್ತಿದ್ದಾರೆ. ಈ ಅಕಾಡೆಮಿಯ ಮೂಲಕ, ಧೋನಿ ಕಾಶ್ಮೀರದ ಆಟಗಾರರನ್ನು ಮುಂದಕ್ಕೆ ತರ ಬಯಸುತ್ತಾರಂತೆ.

ಕಾಶ್ಮೀರದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯುವ ಬಯಕೆಯ ಕುರಿತು ಧೋನಿ ಕ್ರೀಡಾ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದ ಮಾಡಿದೆ. ಆದರೆ  ಕಾಶ್ಮೀರದಲ್ಲಿ ಪರಿಸ್ಥಿತಿ ತಹಬದಿಗೆ ಬಂದ ನಂತರವೇ ಧೋನಿ ಅಕಾಡೆಮಿ ನಿರ್ಮಿಸುತ್ತಾರಂತೆ. ಅಷ್ಟೇ ಅಲ್ಲ, ಧೋನಿ ಈ ಅಕಾಡೆಮಿಯನ್ನು ಉಚಿತವಾಗಿ ಕಾಶ್ಮೀರಿ ಆಟಗಾರರಿಗಾಗಿ ನಡೆಸಲು ಬಯಸುತ್ತಾರಂತೆ. (ಎಸ್.ಎಚ್)

Leave a Reply

comments

Related Articles

error: