ಮೈಸೂರು

ಮಳೆಯ ಅವಾಂತರದಿಂದ ಧರೆಗುರುಳಿದ ಅಗ್ನಿ ಶಾಮಕ ಕಟ್ಟಡದ ಮುಂಭಾಗ

ಮೈಸೂರು,ಆ.9:- ಮೈಸೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಬೆಳಿಗ್ಗೆಯಿಂದಲೂ ಎಡೆ ಬಿಡದೇ ಮಳೆ ಸುರಿಯುತ್ತಲೇ ಇದೆ.

ಮಳೆಯ ಅವಾಂತರದಿಂದ ಪುರಾತನ ಅಗ್ನಿ ಶಾಮಕ ಕಟ್ಟಡದ ಮುಂಭಾಗ ಧರೆಗುರುಳಿದೆ. ಸರಸ್ವತಿ ಪುರಂ ನ ಮುಖ್ಯರಸ್ತೆಯಲ್ಲಿರುವ    ಅಗ್ನಿಶಾಮಕ  ಕಚೇರಿಯ  ಕಟ್ಟಡ ಇದಾಗಿದ್ದು, ಸದ್ಯ ಯಾವುದೇ ಅಪಾಯ  ಕಂಡು ಬಂದಿಲ್ಲ.  ಅಗ್ನಿಶಾಮಕದಳದ  ಕಚೇರಿಯ ಪಕ್ಕದಲ್ಲೇ  ಸಾರ್ವಜನಿಕ ಬಸ್ ನಿಲ್ದಾಣವು ಇದ್ದು  ಆಗಾಗ  ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು  ಪ್ರಯಾಣಿಕರು ಅಗ್ನಿಶಾಮಕದಳದ  ಕಚೇರಿಯತ್ತಲು ಆಗಮಿಸುತ್ತಿದ್ದರು. ಈ ಅವಘಡ ಉಂಟಾದ ಸಂದರ್ಭದಲ್ಲಿ ಯಾವುದೇ ಜನರು ಅಲ್ಲಿ ಇರದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: