ಪ್ರಮುಖ ಸುದ್ದಿವಿದೇಶ

ಪಾಕಿಸ್ತಾನದಲ್ಲಿ ಉಗ್ರರ ದಾಳಿ: 100 ಮಂದಿ ಸಾವು, 250 ಮಂದಿಗೆ ಗಾಯ

ಕರಾಚಿ : ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಪಾಕಿಸ್ತಾನದ ಸೂಫಿ ದರ್ಗಾದದಲ್ಲಿ 100ಕ್ಕೂ ಹೆಚ್ಚುಮಂದಿ ಸಾವನ್ನಪ್ಪಿ 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಸಿಂಧ್ ಪ್ರಾಂತ್ಯದ ಸೆಹ್ವಾನ್ ನಲ್ಲಿರುವ ಲಾಲ್ ಶಹಭಾಝ್ ಖಲಂದರ್ ಹೆಸರಿನ ದರ್ಗಾದಲ್ಲಿ ಧಮಲ್ ಎಂಬ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮದ ಭಾಗವಾಗಿ ಅತೀ ಹೆಚ್ಚು ಸಂಖೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೊದಲಿಗೆ ಗ್ರೆನೇಡ್ ದಾಳಿ ನಡೆಸಿರುವ ಉಗ್ರರು, ಬಳಿಕ ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ದಾಳಿ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯನ್ನು ಬಂದ್ ಮಾಡಲಾಗಿದೆ. ಮುಂದಿನ ಕ್ರಮಗಳ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಾಕಿಸ್ತಾನ ಸೇನಾ ಪಡೆ ಹೇಳಿಕೊಂಡಿದೆ. ಆತ್ಮಾಹುತಿ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಸಾವನ್ನಪ್ಪಿದ ಕುಟುಂಬಸ್ಥರ ಕುರಿತಂತೆ ಸಂತಾಪವನ್ನು ಸೂಚಿಸುತ್ತಿದ್ದೇವೆ. ಗಾಯಾಳುಗಳು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಭಯೋತ್ಪಾದನೆ ವಿರುದ್ಧದ ಪಾಕಿಸ್ತಾನದ ಹೋರಾಟದಲ್ಲಿ ನಾವು ಜತೆಯಾಗಿದ್ದೇವೆ ಎಂದಿದೆ.

Leave a Reply

comments

Related Articles

error: