ಪ್ರಮುಖ ಸುದ್ದಿಮನರಂಜನೆ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ : ‘ಕೆಜಿಎಫ್‌’ಗೆ ರಾಷ್ಟ್ರೀಯ ಪ್ರಶಸ್ತಿ ; ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ‘ಅತ್ಯುತ್ತಮ ಮಕ್ಕಳ ಚಿತ್ರ

ದೇಶ(ನವದೆಹಲಿ)ಆ.9:-   66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಘೋಷಣೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಈ ಬಾರಿ ಸ್ಯಾಂಡಲ್ ವುಡ್ ಗೆ  11 ಪ್ರಶಸ್ತಿಗಳು ಲಭಿಸಿವೆ.

ಅತ್ಯುತ್ತಮ ಸಾಹಸ ಸಿನಿಮಾ ಪ್ರಶಸ್ತಿ, ಬೆಸ್ಟ್ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ  ಕೆಜಿಎಫ್‌ಗೆ ಪ್ರಶಸ್ತಿ ದೊರಕಿದೆ. ಕನ್ನಡದ ‘ನಾತಿಚರಾಮಿ’ ಚಿತ್ರ    ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು,  ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶ್ರುತಿಹರಿಹರನ್‌ ಅವರಿಗೆ ವಿಶೇಷ ಉಲ್ಲೇಖದ ಆಧಾರದ ಮೇಲೆ ಪ್ರಶಸ್ತಿ ಸಿಕ್ಕಿದೆ.   ಬೆಸ್ಟ್ ಎಡಿಟಿಂಗ್‌  ಪ್ರಶಸ್ತಿಯೂ  ಚಿತ್ರಕ್ಕೆ ದೊರಕಿದೆ. ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ  ಪ್ರಶಸ್ತಿ  ಕೂಡ ನಾತಿ ಚರಾಮಿ ಸಿನಿಮಾದ ‘ಮಾಯಾವಿ ಮನವೇ’ ಹಾಡು ಹಾಡಿದ್ದ ಗಾಯಕಿ ಬಿಂದು ಮಾಲಿನಿ ಅವರಿಗೆ ದೊರಕಿದೆ.

ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಪ್ರಶಸ್ತಿ ಲಭ್ಯವಾಗಿದೆ. ಅತ್ಯುತ್ತಮ ಬಾಲನಟ ಪ್ರಶಸ್ತಿಯು ‘ಒಂದಲ್ಲಾ ಎರಡಲ್ಲಾ ‘ಸಿನಿಮಾದ ನಟನೆಗಾಗಿ ಪಿ ವಿ ರೋಹಿತ್‌ಗೆ ಸಿಕ್ಕಿದೆ. . ಡಿ ಸತ್ಯ ಪ್ರಕಾಶ್‌ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಸಿನಿಮಾವು ರಾಷ್ಟ್ರೀಯ ಏಕೀಕರಣ ವಿಭಾಗದಲ್ಲಿ ನರ್ಗಿಸ್​ ದತ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮೂಕಜ್ಜಿಯ ಕನಸು ಚಿತ್ರಕ್ಕೆ ಒಂದು ಪ್ರಶಸ್ತಿ  ಲಭಿಸಿದೆ.  (ಎಸ್.ಎಚ್)

Leave a Reply

comments

Related Articles

error: