ಮೈಸೂರು

ಒಂದಂಕಿ ಮಟ್ಕಾ ಜೂಜಾಟ ಆಡುತ್ತಿದ್ದ ಮೂವರ ಬಂಧನ

ಮೈಸೂರು,ಆ.10:-  09/08/2019 ರಂದು ಮಂಡಿ ಠಾಣಾ ಪೊಲೀಸರು ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾ ಸುನ್ನಿಚೌಕದ ಟೀ ಸ್ಟಾಲ್‍ವೊಂದರ ಮುಂಭಾಗದ ರಸ್ತೆಯಲ್ಲಿ ಒಂದಂಕಿ ಮಟ್ಕಾ ಜೂಜಾಟ ಆಟವಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಮೀವುಲ್ಲಾ ಬಿನ್ ನಜೀರ್ ಅಹಮದ್, (30), ಲಷ್ಕರ್ ಮೊಹಲ್ಲ, ಮೈಸೂರು, ಮೊಹಮ್ಮದ್ ಕೌಸರ್ ಬಿನ್ ಮೊಹಮ್ಮದ್ ವಜೀರ್ (39), ಮಂಡಿಮೊಹಲ್ಲಾ, ಮೈಸೂರು,ಅಬ್ದುಲ್ ವಾಜಿದ್ ಬಿನ್ ಲೇ. ಅಬ್ದುಲ್ ರೌಫ್, (44), ಮಂಡಿ ಮೊಹಲ್ಲಾ, ಮೈಸೂರು  ಎಂದು ಗುರುತಿಸಲಾಗಿದೆ. ಇವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ್ದ  5,800ರೂ.ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.  ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು) ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಗೋಪಾಲ್ ಜಿ ನೇತೃತ್ವದಲ್ಲಿ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅರುಣ್.ಎಲ್ ಸಿಬ್ಬಂದಿಯವರಾದ ಹರೀಶ್, ಚಂದ್ರಶೇಖರ್, ರವಿಗೌಡ, ನಾಗೇಂದ್ರ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: