ಪ್ರಮುಖ ಸುದ್ದಿ

ಶಿರಾಡಿಘಾಟ್ ನಲ್ಲಿ ಆ.12ರವರೆಗೆ ವಾಹನ ಸಂಚಾರ ಬಂದ್ : ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶ

ರಾಜ್ಯ(ಹಾಸನ)ಆ.10:-   ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಇತರೆ ಕಡೆ ಮಳೆ ಅಬ್ಬರ ಹೆಚ್ಚಾಗಿ ಗುಡ್ಡೆ ಕುಸಿತ, ಮರ , ವಿದ್ಯುತ್ ಕಂಬ ಉರುಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಬಂದ್ ಮಾಡಿ ಅಲ್ಲಿನ ಜಿಲ್ಲಾಧಿಕಾರಿ ಅಕ್ರಂ ಪಾಷಾ  ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾರ್ಗದಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ, ತುರ್ತು ಸಮಯದಲ್ಲಿ ಮಾತ್ರ ಲಘು ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ‌ಮಳೆ‌ ಮುಂದುವರಿದಿರುವುದರಿಂದ ಜಿಲ್ಲೆಯ‌ 6 ತಾಲೂಕುಗಳ ಶಾಲಾ ‌ಕಾಲೇಜುಗಳಿಗೆ ರಜೆ‌ ನೀಡಲಾಗಿದೆ.  ಶುಕ್ರವಾರ ದಿಂದ ಆ.12ರವರೆಗೆ ಸಂಜೆ ಏಳರಿಂದ ಮುಂಜಾನೆ ಏಳರವರೆಗೆ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಸಾಮಗ್ರಿಗಳ ವಾಹನ, ಷರತ್ತು ಬದ್ಧ ಸಾರ್ವಜನಿಕ ಬಸ್ ಸಂಚಾರ ಹೊರತು ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದಿದ್ದಾರೆ.

ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರು ಔಷಧಿ, ಪ್ರಥಮ ಚಿಕಿತ್ಸೆ ಉಪಕರಣಗಳು,ಬೇಕಾದಷ್ಟು ಆಹಾರ ಸಾಮಗ್ರಿ, ಕುಡಿಯುವ ನೀರು, ವಾಹನ ಪರವಾನಗಿ ದಾಖಲಾತಿ ಇನ್ನೂ ಮೊದಲಾದವನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ತಪಾಸಣಾಧಿಕಾರಿಗಳಿಗೆ ಕಡ್ಡಾಯ ಪರಿಶೀಲನೆಗೆ ದಾಖಲಾತಿಗಳನ್ನು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: