ಕರ್ನಾಟಕಪ್ರಮುಖ ಸುದ್ದಿ

ಟ್ರಾನ್ಸ್’ಫಾರ್ಮರ್ ಮುಟ್ಟಿ ಆತ್ಮಹತ್ಯೆಗೆ ಶರಣಾದ ರೈತ

ಹಾವೇರಿ: ಸಾಲಬಾಧೆ ತಾಳಲಾರದೆ ರೈತನೊಬ್ಬ ಜಮೀನಿನಲ್ಲಿಯೇ ಟ್ರಾನ್ಸ್’ಫಾರ್ಮರ್ ಏರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ, ಹಾನಗಲ್ ತಾಲೂಕಿನ ಚಿಕ್ಕಾಂಸಿಹೊಸೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಗ್ರಾಮದ ಚಮನ ಸಾಬಾ ಅರಿಶಿನ ಗುಪ್ಪಿ(60) ಮೃತಪಟ್ಟ ರೈತ. ಇವರು 3 ಎಕರೆ ಜಮೀನು ಹೊಂದಿದ್ದರು ಎನ್ನಲಾಗಿದ್ದು, ಜಮೀನಿನಲ್ಲಿ ಭತ್ತ, ತರಕಾರಿ ಬೆಳೆದಿದ್ದರು. ಇದಕ್ಕಾಗಿ ಬ್ಯಾಂಕ್ ಹಾಗೂ ಕೈ ಸಾಲ ಸೇರಿ 4 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು.

ಬೆಳೆ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಮನನೊಂದ ರೈತ ಚಮನ ಜಮೀನಿನಲ್ಲಿರುವ ಟ್ರಾನ್ಸ್’ಫಾರ್ಮರ್ ಏರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: