ಕ್ರೀಡೆ

ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಭಾರತ ಕ್ರಿಕೆಟ್ ತಂಡದ ಆಲ್‌ ರೌಂಡರ್ ಸುರೇಶ್ ರೈನಾ

ದೇಶ(ನವದೆಹಲಿ)ಆ.10:-   ಭಾರತ ಕ್ರಿಕೆಟ್ ತಂಡದ ಆಲ್‌ ರೌಂಡರ್ ಸುರೇಶ್ ರೈನಾ  ಹಾಲೆಂಡ್‌ ನ ಆಮ್‌ ಸ್ಟರ್‌ಡ್ಯಾಮ್‌ ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಅದಕ್ಕಾಗಿ ಅವರು ಮುಂಬರುವ ದೇಶೀಯ ಕ್ರಿಕೆಟ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ.  ಕಳೆದ ವರ್ಷದಿಂದಲೇ 32ರ ಹರೆಯದ ರೈನಾಗೆ ಎಡ ಮೊಣಕಾಲಿನ ಸಮಸ್ಯೆ ಉಲ್ಬಣಿಸಿಕೊಂಡಿತ್ತು. ಇದೀಗ ಸಂಪೂರ್ಣವಾಗಿ ಫಿಟ್ನೆಸ್ ಮರಳಿ ಪಡೆಯಲು ಕನಿಷ್ಠ ಆರು ತಿಂಗಳುಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ.

ಈ ಕುರಿತು  ರೈನಾ ಪ್ರತಿಕ್ರಿಯೆ ನೀಡಿದ್ದು,  ವೈದ್ಯರಾದ ಡಾ. ವ್ಯಾನ್ ಡೆರ್ ಹೂವೆನ್, ರೈನಾಗೆ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಪೂರ್ಣವಾಗಿ ಗುಣಮುಖರಾಗಲು ಕನಿಷ್ಠ 4-6 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆಂದು ತಿಳಿಸಿದ್ದಾರೆನ್ನಲಾಗಿದೆ.

ಭಾರತದ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ  ರೈನಾ ಇದುವರೆಗೆ 18 ಟೆಸ್ಟ್, 226 ಏಕದಿನ ಹಾಗೂ 78 ಟ್ವೆಂಟಿ-20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: