ಪ್ರಮುಖ ಸುದ್ದಿಮೈಸೂರು

ಸಂತ್ರಸ್ಥರಿಗೆ ತಕ್ಷಣವೇ ಸಮಾರೋಪಾದಿಯಲ್ಲಿ ನೆರವು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ

ಮೈಸೂರು,ಆ.11:- ಕನ್ನಡ ಚಳವಳಿ ವಾಟಾಳ್ ಪಕ್ಷದ  ವತಿಯಿಂದ  ಅಧ್ಯಕ್ಷ  ವಾಟಾಳ್ ನಾಗರಾಜು  ಅವರ ನೇತೃತ್ವದಲ್ಲಿ ಸುಮಾರು 15 ರಿಂದ 20 ಜನರು ಕರ್ನಾಟಕ ರಾಜ್ಯದಾದ್ಯಂತ ಹಿಂದೆಂದೂ ಕಾಣದ ಭೀಕರ ಜಲಪ್ರಳಯ ಉಂಟಾಗಿದ್ದು, ಮೈಸೂರು & ಚಾಮರಾಜನಗರ ಜಿಲ್ಲೆ ಜನರು ಪ್ರವಾಹದಿಂದ ತತ್ತರಿಸಿದ್ದಾರೆ. ತಕ್ಷಣವೇ ಸಮಾರೋಪಾದಿಯಲ್ಲಿ ನೆರವು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಇಂದು ನಗರದ ರೈಲ್ವೆ ನಿಲ್ದಾಣದ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿ ನೇಮಕವಾಗಬೇಕು. ಶೀಘ್ರವಾಗಿ ಮಂತ್ರಿ ಮಂಡಳ ರಚನೆ ಆಗಲೇ ಬೇಕು. ನೆರೆಹಾವಳಿಯಿಂದ ಮೃತಪಟ್ಟವರಿಗೆ 25ಲಕ್ಷ ರೂ. ಪರಿಹಾರ ನೀಡಬೇಕು. ಬಹುತೇಕ ಉತ್ತರ ಕರ್ನಾಟಕದ ಜಿಲ್ಲೆಗಳು ಮಳೆಯಿಂದ ಮುಳುಗಿ ಹೋಗಿವೆ .   ಪ್ರಧಾನಿಗಳು ಕರ್ನಾಟಕ ರಾಜ್ಯಕ್ಕೆ ಬರಬೇಕು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ಈ ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸಬಾರದು. ಪ್ರವಾಹ ನಿಂತ ನಂತರದಲ್ಲಿ ನಾವೇ ಹೋಗಿ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ ಮಾಡುತ್ತೇವೆಂದು ಆಗ್ರಹಿಸಿದರು.

ಬಳಿಕ  ಮಾಧ್ಯಮದೊಂದಿಗೆ  ಮಾತನಾಡಿ  ನೆರೆಯಿಂದ ಬಹಳ ಜನರು ಮೃತಪಟ್ಟಿದ್ದಾರೆ. 50ಸಾವಿರ ಕೋಟಿ ಪರಿಹಾರ. ಕೊಡಗಿನಲ್ಲಿ ನೂತನ ಅಭಿವೃದ್ಧಿ ಯೋಜನೆಯನ್ನು ಘೋಷಣೆ ಮಾಡಬೇಕು. ನವಕರ್ನಾಟಕ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಸಚಿವರನ್ನು ನೇಮಕ ಮಾಡಬೇಕು. ಸಚಿವರಿಲ್ಲದೆ ಪರಿಹಾರ ವಿಳಂಬವಾಗಿರುತ್ತದೆ. ಶಾಸನ ಸಭೆಯಲ್ಲಿ ಆಯವ್ಯಯ ಚರ್ಚೆಯಾಗಿಲ್ಲ. ಕೇಂದ್ರ ಸರ್ಕಾರ ಬೇರೆ ರಾಜ್ಯಗಳ ಕಡೆ ತೋರಿಸುವ ಒಲವು ನಮ್ಮ ರಾಜ್ಯಕ್ಕೆ ತೋರಿಸುತ್ತಿಲ್ಲ.  ಆ.13 ರಿಂದ ರಾಯಚೂರು, ಬೆಳಗಾವಿ, ಗುಲ್ಬರ್ಗ ಮತ್ತು ಧಾರವಾಡ ಇತರೆ ಕಡೆ ನೆರೆಯ ಬಗ್ಗೆ ಎಷ್ಟರ ಮಟ್ಟಿಗೆ ಕೆಲಸವನ್ನು ಮಾಡುತ್ತಿದೆ ಎಂದು ಅಧ್ಯಯನ ಮಾಡಲು ತೆರಳುವುದಾಗಿ‌ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: