ಮೈಸೂರು

ರಾಜ್ಯದಲ್ಲಿ ತುಘಲಕ್ ಸರ್ಕಾರ ಆಡಳಿತ ನಡೆಸುತ್ತಿದೆಯೇ : ಕುಮಾರ ಸ್ವಾಮಿ ವಾಕ್ ಪ್ರಹಾರ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ತುಘಲಕ್ ಸರ್ಕಾರಾನಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

ನಂಜನಗೂಡಿನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮೈಸೂರಿಗೆ ಭೇಟಿ ನೀಡಿದ ಕುಮಾರ ಸ್ವಾಮಿ ಮೌಲ್ಯಮಾಪನ ಬಹಿಷ್ಕರಿಸುವ ಪ್ರಾಧ್ಯಾಪಕರಿಗೆ ಶಿಕ್ಷೆ ವಿಚಾರ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು  ಇದೇನು ತುಘಲಕ್ ಸರ್ಕಾರನಾ, ಅಥವಾ ಸದ್ದಾಂ ಹುಸೇನ್ ಸರ್ಕಾರನಾ
ಸಮಸ್ಯೆ ಬಗೆಹರಿಸಿ ಎಂದರೇ ಶಿಕ್ಷೆ ಕೊಡುತ್ತೇವೆ ಎನ್ನುವುದು ಎಷ್ಟು ಸರಿ. ಅರ್ಹತೆ ಇಲ್ಲದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಹೀಗೆ ಆಗುತ್ತದೆ. ಅಧಿಕಾರಿ ಹೇಳಿದ್ದಕ್ಕೆ ಆ ಸಚಿವರು ಹೆಬ್ಬೆಟ್ಟು ಒತ್ತುತ್ತಾರೆ.
ಇಂತಹ ಸಚಿವರಿದ್ದಾಗ ಇಂತಹ ಕಾನೂನುಗಳು ಬರುತ್ತವೆ ಎಂದು ಉತ್ತರಿಸಿದರು.

ಕಳಲೆ ಕೇಶವಮೂರ್ತಿ ಜೆಡಿಎಸ್ ಪಕ್ಷ ತೊರೆದಿದ್ದಕ್ಕೆ ಕಾರಣ ಕೇಳಿದಾಗ ಪ್ರತಿಕ್ರಿಯಿಸಿದ ಅವರು ಅವರೊಬ್ಬ ಅಪಾಯಕಾರಿ ವ್ಯಕ್ತಿ. ಜೆಡಿಎಸ್‌ ಪಕ್ಷ ಬಿಡಲು ನಮ್ಮ ಅನುಮತಿ ಕೇಳಿಲ್ಲ. ಆದರೆ ಮಾಧ್ಯಮಗಳ ಮುಂದೆ ನನ್ನ, ದೇವೆಗೌಡರ ಹೆಸರು ಬಳಸಿದ್ದು ನೋವಾಗಿದೆ‌.ಕೇಶವಮೂರ್ತಿಯವರನ್ನು ಬಹಳಾ ಸಜ್ಜನ ಎಂದುಕೊಂಡಿದ್ದೆ.
ಯಕಶ್ಚಿತ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಈ ರೀತಿ ಸುಳ್ಳು ಹೇಳುತ್ತಾರೆ ಎಂದುಕೊಂಡಿರಲಿಲ್ಲ.ಕಾಂಗ್ರೆಸ್ ಜೊತೆ ಯಾವ ಒಪ್ಪಂದ ಮಾಡಿಕೊಂಡು ಜೆಡಿಎಸ್‌ ಬಿಟ್ಟಿದ್ದಾರೋ ಗೊತ್ತಿಲ್ಲ.ಆದರೆ ಅವರ ನಡೆಯಿಂದ ಅವರೊಬ್ಬ ಅಪಾಯಕಾರಿ ವ್ಯಕ್ತಿ ಅನ್ನುವುದು ಸಾಬೀತಾಗಿದೆ ಎಂದರು.
ನಂಜನಗೂಡಿನಲ್ಲಿ ರಾಷ್ಟ್ರೀಯ ಪಕ್ಷಗಳು ಕೆಸರೆರಚಾಟದ ರಾಜಕೀಯ ಮಾಡುತ್ತಿದ್ದಾರೆ.ಆ ಎರಡೂ ಪಕ್ಷಗಳಲ್ಲಿ ಹಣದಿಂದಲೇ ಉಪಚುನಾವಣೆ ನಡೆಯುತ್ತದೆ. ಆದರೆ ನಮ್ಮ ಪಕ್ಷದಲ್ಲಿ ಸಾಲಸೋಲ ಮಾಡಿಕೊಂಡು ಚುನಾವಣೆ ಎದುರಿಸಬೇಕಿದೆ. ನಂಜನಗೂಡು ಉಪಚುನಾವಣೆ ಜೆಡಿಎಸ್‌ ಪಕ್ಷಕ್ಕೆ ಸಂದಿಗ್ದ ಪರಿಸ್ಥಿತಿ ಉಂಟು ಮಾಡಿದೆ.
ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಇಲ್ಲದೆ ಒಬ್ಬರು ಶ್ರೀನಿವಾಸ್ ಪ್ರಸಾದ್ ಗೆ ಮಣೆ ಹಾಕಿದರೆ ಮತ್ತೊಬ್ಬರು ಕೇಶವಮೂರ್ತಿಗೆ ಮಣೆ ಹಾಕಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ಜೆಡಿಎಸ್ ನ ಮುಖಂಡರು ಅವರ ಜೊತೆಗಿದ್ದರು.

Leave a Reply

comments

Related Articles

error: