ಕ್ರೀಡೆ

ವಿಂಡೀಸ್ ವಿರುದ್ಧ ಭಾರತಕ್ಕೆ 59 ರನ್‌ಗಳ ಜಯ

ಪೋರ್ಟ್ ಆಫ್ ಸ್ಪೇನ್,.12-ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಡಕ್ವರ್ತ್ಲೂಯಿಸ್ ನಿಯಮದಡಿ 59 ರನ್ಗಳ ಅಂತರದಿಂದ ಜಯಿಸಿದೆ.

ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 125 ಎಸೆತಗಳಲ್ಲಿ 120 ರನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕ (71) ನೆರವಿನಿಂದ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು.

ಪಂದ್ಯಕ್ಕೆ ಎರಡನೇ ಬಾರಿ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ತ್ಲೂಯಿಸ್ ನಿಯಮದಡಿ ವಿಂಡೀಸ್ ಗೆಲುವಿಗೆ 46 ಓವರ್ಗಳಲ್ಲಿ 270 ರನ್ ಪರಿಷ್ಕೃತ ಗುರಿ ಪಡೆಯಿತು. ಈ ಗುರಿ ಬೆನ್ನತ್ತಿದ ವಿಂಡೀಸ್ 42 ಓವರ್ಗಳಲ್ಲಿ ಕೇವಲ 210 ರನ್ಗಳಿಸಲಷ್ಟೇ ಶಕ್ತವಾಯಿತು.

ಆತಿಥೇಯ ತಂಡ ಒಂದು ಹಂತದಲ್ಲಿ 4 ವಿಕೆಟ್ಗಳ ನಷ್ಟಕ್ಕೆ 148 ರನ್ ಗಳಿಸಿತು. ಆದರೆ, ದಿಢೀರ್ ಕುಸಿತು ಕಂಡು 62 ರನ್ಗೆ ಕೊನೆಯ 6 ವಿಕೆಟ್ಗಳನ್ನು ಕಳೆದುಕೊಂಡು 210 ರನ್ಗಳಿಸುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಭಾರತದ ಪರ ಭುವನೇಶ್ವರ ಕುಮಾರ್ 4, ಮುಹಮ್ಮದ್ ಶಮಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.

ಲಾರಾ ದಾಖಲೆ ಮುರಿದ ಗೇಲ್

ವಿಂಡೀಸ್ ಪರ ಗರಿಷ್ಠ 300ನೇ ಏಕದಿನ ಪಂದ್ಯವನ್ನಾಡಿದ ಆರಂಭಿಕ ಆಟಗಾರ ಕ್ರಿಸ್ ಗೇಲ್ ಮಹತ್ವದ ಮೈಲುಗಲ್ಲು ತಲುಪಿದರು. ವಿಂಡೀಸ್ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿರುವ ಲೆಜೆಂಡ್ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕಿದರು. ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಒಂದು ರನ್ ಗಳಿಸಿದ ಗೇಲ್ ಒಟ್ಟು 10,353 ರನ್ ಗಳಿಸಿದರು. ಒಟ್ಟು 10,348 ರನ್ ಗಳಿಸಿದ್ದ ಲಾರಾ ಅವರ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದರು.

ಎವಿನ್ ಲೂಯಿಸ್(65) ಮೊದಲ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿ ಉತ್ತಮ ಆರಂಭವನ್ನು ನೀಡಿದ ಗೇಲ್ 24 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು. (ಎಂ.ಎನ್)

 

Leave a Reply

comments

Related Articles

error: