ಮೈಸೂರು

ಬಸ್ಸಿನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ  

ಮೈಸೂರು,ಆ.12:-  ಮೈಸೂರು ನಗರದ ಸಿಸಿಬಿ ಪೊಲೀಸರು 11/08/2019 ರಂದು ಮಾಹಿತಿ ಮೇರೆಗೆ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯಲ್ಲಿರುವ ಜೈ ಜ್ಯುವೆಲ್ಲರ್ಸ್ ಮುಂಭಾಗ ಕಾರ್ಯಾಚರಣೆ ನಡೆಸಿ ಚಿನ್ನದ ಸರವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ನಯಾಜ್ ಪಾಷ @ ತಲ್ಲಾ ಬಿನ್ ಅಲ್ಲಾಭಕ್ಷ್ , (20), ಸಾತಗಳ್ಳಿ, ಮೈಸೂರು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಈತನು ತನ್ನ ಸ್ನೇಹಿತ ಯಾಸಿನ್ ಪಾಷ ಎಂಬಾತನ ಜೊತೆ ಸೇರಿಕೊಂಡು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ಹೆಂಗಸಿನ ಕತ್ತಿನಿಂದ ಚಿನ್ನದ ಸರ ಕಳುವು ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ ಈತನಿಂದ   75,000ರೂ. ಮೌಲ್ಯದ 22 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿರುತ್ತಾರೆ.

ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಮತ್ತೋರ್ವ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ (ಕಾ & ಸು)   ಮುತ್ತುರಾಜು ಎಂ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪ್ರಭಾರ ಎಸಿಪಿ ಜಿ.ಎನ್ ಮೋಹನ್  ನೇತೃತ್ವದಲ್ಲಿ ಸಿಸಿಬಿಯ ಪೊಲೀಸ್ ಇನ್ಸಪೆಕ್ಟರ್ ಕಿರಣ್‍ಕುಮಾರ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ರಾಮಸ್ವಾಮಿ, ರಾಜೇಂದ್ರ, ಚಂದ್ರಶೇಖರ್, ಚಿಕ್ಕಣ್ಣ, ಗಣೇಶ್, ಲಕ್ಷ್ಮೀಕಾಂತ್, ಅಸ್ಗರ್ ಖಾನ್, ಶಿವರಾಜು, ಯಾಕೂಬ್ ಷರೀಫ್, ನಿರಂಜನ್, ಚಾಮುಂಡಮ್ಮ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: