ಕ್ರೀಡೆಪ್ರಮುಖ ಸುದ್ದಿ

ಕುಸ್ತಿಪಟು ಬಬಿತಾ ಫೋಗಟ್-ಅವರ ತಂದೆ ಮಹಾವೀರ್ ಫೋಗಟ್ ಬಿಜೆಪಿ ಸೇರ್ಪಡೆ

ದೇಶ(ನವದೆಹಲಿ)ಆ.12:- ಚಾಂಪಿಯನ್ ಕುಸ್ತಿಪಟು ಬಬಿತಾ ಫೋಗಟ್ ಮತ್ತು ಅವರ ತಂದೆ ಮಹಾವೀರ್ ಫೋಗಟ್ ಅವರು ಇಂದು ತಮ್ಮ ತಾಯ್ನಾಡು ಹರಿಯಾಣದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಆಡಳಿತಾರೂಢ  ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡರು.

ಕ್ರೀಡಾ ಸಚಿವ ಕಿರಣ್ ರಿಜಿಜು ಪಕ್ಷದ ಸದಸ್ಯತ್ವವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡಿರು.  29 ವರ್ಷದ ಬಬಿತಾ ಫೋಗಟ್ ಮೂರು ಬಾರಿ ಕಾಮನ್ವೆಲ್ತ್ ನಲ್ಲಿ  ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದ್ದಾರೆ. ಅಮೀರ್ ಖಾನ್ ಅಭಿನಯದ 2016 ರ ಬಾಲಿವುಡ್ ಬ್ಲಾಕ್ಬಸ್ಟರ್ “ದಂಗಲ್” ಗೆ ಅವರು ಮತ್ತು ಅವರ ತಂದೆಯೇ ಸ್ಫೂರ್ತಿ.   ಬಬಿತಾ ಮತ್ತು ಅವರ ಅಕ್ಕ ಪುರುಷ ಪ್ರಾಬಲ್ಯವಾಗಿರುವ ಕುಸ್ತಿಯ ಜಗತ್ತಿನಲ್ಲಿ ಕುಸ್ತಿಪಟುಗಳಾಗಿ ಗುರುತಿಸಿಕೊಂಡಿದ್ದಾರೆ.  ಅವರ ತಂದೆಯೇ ಅವರಿಗೆ ಮಾರ್ಗದರ್ಶಕರು ಮತ್ತು ತರಬೇತುದಾರರಾಗಿದ್ದಾರೆ.

ಈ ವರ್ಷ ರಾಜ್ಯ ಚುನಾವಣೆಗಳು ನಡೆಯಲಿರುವ ಹರಿಯಾಣದಲ್ಲಿ ಪಕ್ಷಕ್ಕೆ ಸಹಾಯ ಮಾಡಲು ಬಿಜೆಪಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕ್ರಮ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಿಗೆ ಫೋಗಟ್ ಬಹಳ ಬೆಂಬಲ ನೀಡಿದ್ದಾರೆನ್ನಲಾಗಿದೆ. ಈ ಕುರಿತು ಮಾತನಾಡಿರುವ ಬಬಿತಾ ನಾನು ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ. ನಾನು 2014 ರಿಂದಲೂ ಅವರ ಅಭಿಮಾನಿಯಾಗಿದ್ದೇನೆ. ಅವರು ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಎಲ್ಲರೂ ಬಿಜೆಪಿಗೆ ಸೇರಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ”  ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: