ಮೈಸೂರು

ಸ್ಕೂಲ್ ಆಫ್ ರಿದಂ ಸಂಗೀತ ಶಾಲೆಯ ಮಕ್ಕಳಿಂದ ನೆರೆ ಸಂತ್ರಸ್ತರಿಗೆ ನೆರವು

ಮೈಸೂರು,12:- ಮೈಸೂರು ನಗರದ ರಾಮಾನುಜ ರಸ್ತೆಯಲ್ಲಿರುವ ರಾಘವೇಂದ್ರ ಪ್ರಸಾದ್ ಸ್ಕೂಲ್ ಆಫ್ ರಿದಂ ಸಂಗೀತ ಶಾಲೆಯ ಮಕ್ಕಳಿಂದ ನೆರೆ ಸಂತ್ರಸ್ತರಿಗೆ ಸಹಾಯ ನೀಡಲು ಮುಂದಾಗಿದ್ದಾರೆ.

ಮಕ್ಕಳೆಲ್ಲಾ ಕೂಡಿಟ್ಟ ಹಣದಲ್ಲಿ ನೆರೆ ಸಂತ್ರಸ್ತರಿಗೆ ಸುಮಾರು ಹತ್ತು ಸಾವಿರ ರೂಪಾಯಿ ಮೌಲ್ಯದ  ಅಗತ್ಯ ವಸ್ತುಗಳನ್ನು ಖರೀದಿಸಿ ಸಂಗೀತ ಶಾಲೆಯ ಮುಖ್ಯಸ್ಥರಾದ ರಾಘವೇಂದ್ರ ಪ್ರಸಾದ್ ಮುಖೇನ ಜಿಲ್ಲಾಡಳಿತ ಸಂಗ್ರಹಿಸುತ್ತಿರುವ ನೆರೆ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ತಲುಪಿಸಿ ಹಿರಿಯರಿಗಿಂತ ಮಕ್ಕಳೇನು ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಡಾ. ಸಿ.ಆರ್ ರಾಘವೇಂದ್ರ ಪ್ರಸಾದ್ ,ಶಾಲೆಯ ಮಕ್ಕಳಾದ ಭಾರ್ಗವ ಭಟ್,  ಸಮನ್ವಿತಾ, ಕಶ್ಯಪ್, ಕಿರಣ್ ಆರ್, ಸುಹಾಸ್, ನಿಜಗುಣ,  ಕಶ್ಯಪ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: