ಮೈಸೂರು

ವೃದ್ಧಾಶ್ರಮದಲ್ಲಿ ಅಮೂಲ್ಯ ಸಮಯ ಕಳೆದ ವಿದ್ಯಾರ್ಥಿಗಳು

ಸಮಾಜಕ್ಕೆ ಕಿರುಕಾಣಿಕೆ ಸಲ್ಲಿಸುವ ಸಲುವಾಗಿ ಎನ್ಪಿಎಸ್ಐ ವಿದ್ಯಾರ್ಥಿಗಳು ಉದಯಗಿರಿಯ ‘ಫೂರ್ ಲಿಟಲ್ ಸಿಸ್ಟರ್ಸ್’ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಎನ್ಪಿಎಸ್ಐಯು ಹಣವನ್ನು ವೃದ್ಧಾಶ್ರಮಕ್ಕೆ ದತ್ತಿನಿಧಿಯಾಗಿ ನೀಡಿತು.

ವೃದ್ಧಾಶ್ರಮದಲ್ಲಿನ ಹಿರಿಯರೊಂದಿಗೆ ಕಾಲ ಕಳೆದ ವಿದ್ಯಾರ್ಥಿಗಳು ಅವರ ಕಷ್ಟ-ಸುಖ ಹಂಚಿಕೊಂಡರು. ಅಲ್ಲದೇ, ಹಿರಿಯ ನಾಗರಿಕರಿಗಾಗಿ ತಂದಿದ್ದ ಸಿಹಿಯೂಟವನ್ನು ಬಡಿಸಿ ಸಂತಸಪಟ್ಟರು. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೊಂದು ವಿಭಿನ್ನ ಅನುಭವವಾಗಿತ್ತು. ಮನೆಯಿಂದಲೇ ದಾನ ಕಾರ್ಯ ಆರಂಭವಾಗಬೇಕು ಮತ್ತು ಅದು ಅಲ್ಲಿಗೆ ನಿಲ್ಲಬಾರದೆಂಬ ವಿಷಯವನ್ನು ಕೂಡ ಅವರು ಅರಿತರು. ದಾನ ನೀಡುವುದರಿಂದ ಸಮಾಜವನ್ನು ಉತ್ತಮವಾಗಿ ಕಟ್ಟಬಹುದು. ಹಾಗಾಗಿ ದಾನ ಕಾರ್ಯ ನಿರಂತರವಾಗಬೇಕೆಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.

Leave a Reply

comments

Tags

Related Articles

error: