ಮನರಂಜನೆ

ನಟಿ ಆಲಿಯಾ ಭಟ್ ನನಗೊಪ್ಪಿಸಿ ಎಂದ ಬಾಲಿವುಡ್ ನಟ ರಣಬೀರ್ ಕಪೂರ್ ? : ಶೀಘ್ರದಲ್ಲೇ ವಿವಾಹ

ದೇಶ(ನವದೆಹಲಿ)ಆ.13:- ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಆದರೆ ಈಗ ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಬಹುದು ಎಂದು ಹೇಳಲಾಗುತ್ತಿದೆ.

ಮುಂದಿನ ವರ್ಷ ರಣಬೀರ್ ಮತ್ತು ಆಲಿಯಾ ಭಟ್ ತಮ್ಮ ಸಂಬಂಧಕ್ಕೆ ಹೊಸ ಹೆಸರನ್ನು ನೀಡಬಹುದು ಎಂಬ ಮಾಹಿತಿ ಹೊರಬರುತ್ತಿದೆ. ಮುಂಬೈನ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿದ್ದು, ನಟಿ ಆಲಿಯಾಭಟ್ ತಂದೆ, ಚಿತ್ರ ನಿರ್ದೇಶಕ ಮಹೇಶ್ ಭಟ್ ರನ್ನು ರಣಬೀರ್ ಕಪೂರ್ ಭೇಟಿ ಮಾಡಿದ್ದು, ಅವರ ಜೊತೆ ಅಧಿಕೃತವಾಗಿ ಆಲಿಯಾರನ್ನು ವಿವಾಹ ಮಾಡಿಕೊಡಲು ಕೇಳಿದ್ದು, ಈ ವೇಳೆ ಮಹೇಶ್ ಭಟ್ ಅವರ ಕಣ್ಣುಗಳು ತೇವಗೊಂಡಿದ್ದವು  ಎನ್ನಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ನಟಿ ಆಲಿಯಾಭಟ್ ಮುಂಬೈನಲ್ಲಿ ಡಿಸೈನರ್ ಸವ್ಯಸಾಚಿ ಮುಖರ್ಜಿ ಅವರ ಶಾಪ್ ಹೊರಗೆ ಕಾಣಿಸಿಕೊಂಡಿದ್ದು, ಅವರು ತಮ್ಮ ವಿವಾಹಕ್ಕಾಗಿ ಲೆಹೆಂಗಾ ಆರ್ಡರ್ ನೀಡಲು ಬಂದಿದ್ದರೆಂಬ ಸುದ್ದಿಗಳು ಹರಿದಾಡುತ್ತಿವೆ. (ಎಸ್.ಎಚ್)

Leave a Reply

comments

Related Articles

error: