ಮನರಂಜನೆ

ಗೂಗಲ್​ ಸರ್ಚ್ ​ನಲ್ಲಿ ಸೆಲೆಬ್ರಿಟಿಗಳಾದ ಪ್ರಧಾನಿ ನರೇಂದ್ರ ಮೋದಿ,ಸೂಪರ್ ಸ್ಟಾರ್ ಸಲ್ಮಾನ್,ಶಾರುಖ್ ಖಾನ್ ಹಿಂದಿಕ್ಕಿದ ನಟಿ ಸನ್ನಿ ಲಿಯೋನ್

ದೇಶ(ನವದೆಹಲಿ)ಆ.13:-  ಬಾಲಿವುಡ್  ನಟಿ ಸನ್ನಿ ಲಿಯೋನ್ ಭಾರತದ ಮೋಸ್ಟ್ ಗೂಗಲ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇನ್ನೂ ಅಗ್ರಸ್ಥಾನದಲ್ಲಿದ್ದು, ಗೂಗಲ್​ ಸರ್ಚ್ ​ನಲ್ಲಿ ಸೆಲೆಬ್ರಿಟಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.

ಗೂಗಲ್ ಟ್ರೆಂಡ್ಸ್ ವಿಶ್ಲೇಷಣೆಯ ಪ್ರಕಾರ, ಸನ್ನಿಲಿಯೋನ್ ಕುರಿತು  ಹೆಚ್ಚಿನ ಹುಡುಕಾಟಗಳು ಆಕೆಯ ಕುರಿತು ನಿರ್ಮಾಣವಾದ  ಅವರ ಬಯೋಪಿಕ್ ಸರಣಿ ‘ಕರೆಣ್ ಜಿತ್ ಕೌರ್ : ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಕುರಿತ ಮಾಹಿತಿ ಮತ್ತು ವಿಡಿಯೋಗಾಗಿ ಹುಡುಕಾಟ ನಡೆದಿದೆ ಎನ್ನಲಾಗಿದೆ.

ಅಲ್ಲದೆ, ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಿಂದಲೂ ಹೆಚ್ಚಿನ ಮಂದಿ ಸನ್ನಿಗಾಗಿ ಹಡುಕಾಟ ನಡೆಸಿದ್ದಾರೆ.  ಕಳೆದ ವರ್ಷ ಕೂಡ ಭಾರತದ ಮೋಸ್ಟ್ ಗೂಗಲ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸನ್ನಿ ಅಗ್ರಸ್ಥಾನದಲ್ಲಿದ್ದರು.

ಸನ್ನಿ ತನ್ನ ಮುಂಬರುವ ಚಿತ್ರ ಕೋಕಾಕೋಲದಲ್ಲಿ ಭೋಜ್ಪುರಿ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದು, ಉತ್ತರ ಪ್ರದೇಶದಲ್ಲಿ  ಕಥೆ ಸಾಗಲಿದೆ. ಈ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ ಸನ್ನಿ ಕೋಕಾಕೋಲಾದಲ್ಲಿ ನನ್ನ ಕೈಲಾದಷ್ಟು ಶ್ರಮವಹಿಸಿ ಪಾತ್ರ ನಿರ್ವಹಿಸುತ್ತೇನೆ. ಇದು ಪ್ರೇಕ್ಷಕರನ್ನು ತಲುಪಲಿದೆ ಎಂಬ ವಿಶ್ವಾಸವಿದೆ. ನನ್ನ ಕೆಲಸದ ವಿಷಯಕ್ಕೆ ಬಂದಾಗ, ನಾನು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಮುಕ್ತ ಮನಸ್ಸನ್ನು ಇಟ್ಟುಕೊಳ್ಳುತ್ತೇನೆ. ಅದು ಹೊಸ ಭಾಷೆ ಕೂಡ ಆಗಿರಲಿ, ಇದು ನಟನೆಯಲ್ಲಿ ಬೆಳೆಯಲು ನನಗೆ ಸಹಾಯ ಮಾಡುತ್ತದೆ ಎಂದಿದ್ದರು. (ಎಸ್.ಎಚ್)

Leave a Reply

comments

Related Articles

error: