ಮನರಂಜನೆ

ಲಾಸ್ ಏಂಜಲೀಸ್ ನಲ್ಲಿ ಮನೆ ಹುಡುಕುತ್ತಿದ್ದಾರಂತೆ ದಕ್ಷಿಣ ಭಾರತದ ಖ್ಯಾತ ಸಿನಿ ತಾರೆಯರಾದ ಅನುಷ್ಕಾ-ಪ್ರಭಾಸ್ !?

ದೇಶ(ನವದೆಹಲಿ)ಆ.13:- ದಕ್ಷಿಣ ಭಾರತದ ದಿಗ್ಗಜ ಸಿನಿ ತಾರೆ ಪ್ರಭಾಸ್ ಇತ್ತೀಚಿನ ದಿನಗಳಲ್ಲಿ ‘ಸಾಹೋ’ ಚಿತ್ರದ ಬಿಡುಗಡೆ ಕುರಿತಂತೆ ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುಜಿತ್ ಅವರ ನಿರ್ದೇಶನದಲ್ಲಿ ‘ಸಾಹೋ’ ಚಿತ್ರ ಮೂಡಿಬಂದಿದ್ದು, ಆಗಸ್ಟ್ 30ರಂದು ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಏತನ್ಮಧ್ಯೆ ಮತ್ತೊಂದು ಸುದ್ದಿ ಹರಡಿದ್ದು ಕಳೆದ ಕೆಲವು ದಿನಗಳಿಂದ ಪ್ರಭಾಸ್ ಮತ್ತು ಖ್ಯಾತ ನಟಿ ಅನುಷ್ಕಾ ಶೆಟ್ಟಿ ಇಬ್ಬರೂ ಜೊತೆಯಾಗಿ ಲಾಸ್ ಏಂಜಲೀಸ್ ನಲ್ಲಿ ಮನೆ ಹುಡುಕುತ್ತಿದ್ದಾರಂತೆ!

ಮುಂಬೈನ ಮಾಧ್ಯಮವೊಂದರ ವರದಿಯ ಪ್ರಕಾರ ಪ್ರಭಾಸ್ ಮತ್ತು ಅನುಷ್ಕಾ ಅವರನ್ನು ಲಾಸ್ ಏಂಜಲೀಸ್ ನಲ್ಲಿ ಜೊತೆಯಾಗಿ ನೋಡಲಾಗಿದೆಯಂತೆ.  ಇಬ್ಬರೂ ಮನೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಮಾಹಿತಿಯಂತೆ ಪ್ರಭಾಸ್ ಅನುಷ್ಕಾಗಾಗಿ ‘ಸಾಹೋ’ ಚಿತ್ರದ ಸ್ಪೆಶಲ್ ಸ್ಕ್ರೀನಿಂಗ್ ಕೂಡ ಇರಿಸಿದ್ದಾರಂತೆ. ಅವರ ಲವ್ ಸ್ಟೋರಿ ಕೂಡ ಸದಾ ಸುದ್ದಿಯಲ್ಲಿರುತ್ತದೆ. ‘ಬಾಹುಬಲಿ’ ‘ಬಾಹುಬಲಿ2’ ‘ಮಿರ್ಚಿ’ ಮತ್ತು ‘ಬಿಲ್ಲಾ’ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಲಾಸ್ ಏಂಜಲೀಸ್ ನಲ್ಲಿ ಮನೆ ಹುಡುಕುತ್ತಿರುವ ಕುರಿತು ಹಬ್ಬಿರುವ ವದಂತಿಯಲ್ಲಿ ಇಷ್ಟು ನಿಜವಿದೆಯೋ, ಸುಳ್ಳಿದೆಯೋ ಹೊತ್ತಿಲ್ಲ. ಸಮಯ ಬಂದಾಗಲೇ ನಿಜ ತಿಳಿಯಬೇಕು. (ಎಸ್.ಎಚ್)

Leave a Reply

comments

Related Articles

error: