ಮನರಂಜನೆ

ಆ. 18 ರಂದು `ಪೈಲ್ವಾನ್’ ಆಡಿಯೋ ರಿಲೀಸ್ ಕಾರ್ಯಕ್ರಮ

ಬೆಂಗಳೂರು,ಆ.13-ಕಿಚ್ಚ ಸುದೀಪ್ ಅಭಿನಯದ `ಪೈಲ್ವಾನ್’ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಹೀಗಾಗಿ ಪೈಲ್ವಾನ್ ಚಿತ್ರತಂಡ ನಿಗದಿ ಪಡಿಸಿದ ದಿನದಂದು ಅಂದರೆ (ಆ. 9) ರಂದು ಕಾರ್ಯಕ್ರಮ ನಡೆಯಲಿಲ್ಲ. ಈಗ ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದೇ ಭಾನುವಾರ (ಆ.18) ರಂದು ಕಾರ್ಯಕ್ರಮ ನಡೆಯಲಿದೆ. ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ನಡೆಯುತ್ತಿಲ್ಲ. ಆಯ್ದ ವ್ಯಕ್ತಿಗಳಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ.

ಪೈಲ್ವಾನ್ಸಿನಿಮಾದಲ್ಲಿ ಸುದೀಪ್ ಗೆ ಹಿಂದಿಯ ಆಕಾಂಕ್ಷ ಸಿಂಗ್ ಜೋಡಿಯಾಗಿದ್ದಾರೆ. ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 12 ರಂದು ಚಿತ್ರ ದೇಶಾದ್ಯಂತ ಬಿಡುಗಡೆ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. (ಎಂ.ಎನ್)

Leave a Reply

comments

Related Articles

error: