ಕ್ರೀಡೆ

 24 ವರ್ಷಗಳ ನಂತರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮರಳಿದ ಕ್ರಿಕೆಟ್ : ಭಾರತಕ್ಕೆ ಪದಕಗಳನ್ನು ಗೆಲ್ಲುವ ಅವಕಾಶ

ದೇಶ(ನವದೆಹಲಿ)ಆ.13:-   24 ವರ್ಷಗಳ ನಂತರ ಕ್ರಿಕೆಟ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮರಳಿದ್ದು, ಭಾರತಕ್ಕೆ ಪದಕಗಳನ್ನು ಗೆಲ್ಲುವ ಅವಕಾಶವಿದೆ. 2022 ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟಿ 20 ಕ್ರಿಕೆಟ್ ಸೇರ್ಪಡೆಗೊಳ್ಳಲಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಮಂಗಳವಾರ ಪ್ರಕಟಿಸಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟ (ಕಾಮನ್‌ವೆಲ್ತ್ ಕ್ರೀಡಾಕೂಟ 2002) ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಕಾಮನ್ವೆಲ್ತ್ ಕ್ರೀಡಾಕೂಟವು 2022 ರಲ್ಲಿ ಜುಲೈ 27 ರಿಂದ ಆಗಸ್ಟ್ 7 ರವರೆಗೆ ನಡೆಯಲಿದೆ. 18 ಕ್ರೀಡೆಗಳಲ್ಲಿ ಸುಮಾರು 45,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 2022 ರಲ್ಲಿ ಎಲ್ಲಾ ಕ್ರಿಕೆಟ್ ಪಂದ್ಯಗಳು ಬರ್ಮಿಂಗ್ಹ್ಯಾಮ್ನ ಎಡ್ಬಸ್ಟನ್ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಎಂಟು ಮಹಿಳಾ ಕ್ರಿಕೆಟ್ ತಂಡಗಳು ಭಾಗವಹಿಸಲಿದ್ದು, ಇದು ಎಂಟು ದಿನಗಳ ಕಾಲ ನಡೆಯಲಿದೆ. ಮಹಿಳಾ ಕ್ರಿಕೆಟ್ ಜೊತೆಗೆ, ಸಿಜಿಎಫ್ (ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್) ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೀಚ್ ವಾಲಿಬಾಲ್ ಮತ್ತು ಪ್ಯಾರಾ ಟೇಬಲ್ ಟೆನಿಸ್ ಅನ್ನು ಸೇರಿಸಲು ಅನುಮೋದನೆ ನೀಡಿದೆ.

1998 ರ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿರುವುದು ಇದೇ ಮೊದಲು. 1998 ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದಕ್ಷಿಣ ಆಫ್ರಿಕಾದ ಪುರುಷರ ತಂಡ 50 ಓವರ್‌ಗಳ ಆಟದಲ್ಲಿ ಚಿನ್ನದ ಪದಕ ಗೆದ್ದಿತು. ಆಗ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಕೌಲಾಲಾಂಪುರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಚಿನ್ ತೆಂಡೂಲ್ಕರ್, ಜ್ಯಾಕ್ ಕಾಲಿಸ್, ರಿಕಿ ಪಾಂಟಿಂಗ್ ಮುಂತಾದ ಕ್ರಿಕೆಟ್ ನ ದಂತಕಥೆಗಳು ಭಾಗವಹಿಸಿದ್ದರು.

ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಅಧ್ಯಕ್ಷ ಲೂಯಿಸ್ ಮಾರ್ಟಿನ್, “ಇಂದು ಒಂದು ಐತಿಹಾಸಿಕ ದಿನವಾಗಿದೆ. ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಮರಳುವುದನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ. ಕ್ರಿಕೆಟ್ ಅನ್ನು ಕೊನೆಯ ಬಾರಿಗೆ ಕಾಮನ್ವೆಲ್ತ್ ನಲ್ಲಿ 1998 ರಲ್ಲಿ ಕೌಲಾಲಂಪುರದಲ್ಲಿ 50–50 ಓವರ್‌ಗಳಲ್ಲಿ ಆಡಲಾಯಿತು.  ಈಗ ಟಿ 20 ಕ್ರಿಕೆಟ್ ನ್ನು ಅದರಲ್ಲಿ ಸೇರಿಸಲಾಗಿದ್ದು, ಮಹಿಳಾ ಟಿ 20 ಕ್ರಿಕೆಟ್ ನ್ನು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸಲು ಕಾಮನ್ವೆಲ್ತ್ ಕ್ರೀಡಾಕೂಟವು ಅತ್ಯುತ್ತಮ ವೇದಿಕೆಯಾಗಿದೆ. (ಎಸ್.ಎಚ್)

Leave a Reply

comments

Related Articles

error: