ಮೈಸೂರು

ದೇವರಾಜ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ : ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ ಸಮಸ್ಯೆ ಆಲಿಸಿದ ಶಾಸಕ ಎಲ್.ನಾಗೇಂದ್ರ

ಮೈಸೂರು,ಆ.13:- ನಿನ್ನೆ ದೇವರಾಜ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಇಂದು ಶಾಸಕ ಎಲ್.ನಾಗೇಂದ್ರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ ಸಮಸ್ಯೆಯನ್ನು ಆಲಿಸಿದರು.

ಮೈಸೂರು ಮಹಾನಗರ ಪಾಲಿಕೆ ತಂಡದೊಂದಿಗೆ  ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಅವರು ವರ್ತಕರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿ ,  ಬೆಂಕಿ ಬಿದ್ದ ಸ್ಥಳಕ್ಕೆ ನಿನ್ನೆಯೇ ಭೇಟಿ ನೀಡಿದ್ದೆ. ಇಂದು ಕೂಡ ಪಾಲಿಕೆ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಕಟ್ಟಡ ಪುನರ್ ನಿರ್ಮಾಣ ಅಥವಾ ಕೆಡವುದರ ಬಗ್ಗೆ ತಜ್ಞರ ವರದಿಯನ್ನು ಕೋರ್ಟ್ ಕೇಳಿದೆ. ತಜ್ಞರ ವರದಿ ನಂತರವಷ್ಟೆ ದೇವರಾಜ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.

ಹಿಂದಿನ ಸರ್ಕಾರ ಹತ್ತು ಕೋಟಿ ಹಣ ನೀಡಿದೆ. ಮತ್ತಷ್ಟು ಹಣದ ಅಗತ್ಯವಿದ್ದಲ್ಲಿ ಸರ್ಕಾರದಿಂದ ಹಣ ಕೊಡಿಸುವ ಬಗ್ಗೆ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರವೇ ಇರುವುದರಿಂದ ಸಿಎಂ ಅವರನ್ನು ಇಲ್ಲಿ ಪರಿಶೀಲನೆಗೆ ಕರೆತರುವ ಬಗ್ಗೆ ಪ್ರಯತ್ನಿಸುತ್ತೇನೆ. ವಾಸ್ಥವ ಸ್ಥಿತಿಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಎಲ್ಲವೂ ಕೋರ್ಟ್ ತೀರ್ಮಾನದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ಶಾಸಕ ಎಲ್ ನಾಗೇಂದ್ರ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: