ದೇಶ

ಸಂಸದ ಶಶಿ ತರೂರ್ ಗೆ ಬಂಧನ ವಾರೆಂಟ್

ಕೋಲ್ಕತ್ತಾ,(ಪಶ್ಚಿಮ ಬಂಗಾಲ),ಆ.13- ಸಂಸದ ಶಶಿ ತರೂರ್ ಗೆ ಕೋಲ್ಕತ್ತಾ ಕೋರ್ಟ್ ಮಂಗಳವಾರ ಬಂಧನ ವಾರೆಂಟ್ ಹೊರಡಿಸಿದೆ.

2019 ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಲ್ಲಿ ಅದುಹಿಂದೂ ಪಾಕಿಸ್ತಾನ್ರಚನೆಯ ಸನ್ನಿವೇಶವನ್ನು ನಿರ್ಮಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ವಕೀಲರಾದ ಸುಮೀತ್ ಚೌಧರಿ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಒಂದು ವೇಳೆ ಅವರು (ಬಿಜೆಪಿ) ಲೋಕಸಭೆಯಲ್ಲಿ ಗೆಲುವು ಪುನರಾವರ್ತಿಸಿದರೆ ನಮಗೆ ಅರ್ಥವಾಗಿರುವ ನಮ್ಮ ಪ್ರಜಾತಂತ್ರ ಸಂವಿಧಾನ ಉಳಿಯುವುದಿಲ್ಲ ಸಂವಿಧಾನದಿಂದ ಅವರಿಗೆ ತೆಗೆಯಬೇಕಾದ ಅಂಶಗಳನ್ನು ತೆಗೆದು, ಭಾರತಕ್ಕೆ ಹೊಸ ಸಂವಿಧಾನ ಬರೆಯುತ್ತಾರೆ ಎಂದಿದ್ದರು.

ಹೊಸ ಸಂವಿಧಾನವು ಹಿಂದೂ ರಾಷ್ಟ್ರದ ಸಿದ್ಧಾಂತದೊಂದಿಗೆ ರಚನೆ ಆಗುತ್ತದೆ. ಅದರಲ್ಲಿ ಅಲ್ಪಸಂಖ್ಯಾತರಿಗೆ ಸಮಾನತೆ ತೆಗೆಯಲಾಗುತ್ತದೆ. ಮೂಲಕ ಹಿಂದೂ ಪಾಕಿಸ್ತಾನ್ ನಿರ್ಮಾಣ ಆಗುತ್ತದೆ. ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದ ಮಹಾ ನಾಯಕರಾದ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಮತ್ತಿತರರು ಹೋರಾಟ ನಡೆಸಿರುವುದು ಇದಕ್ಕಾಗಿ ಅಲ್ಲ ಎಂದಿದ್ದರು ಶಶಿ ತರೂರ್. (ಎಂ.ಎನ್)

 

Leave a Reply

comments

Related Articles

error: