ಮೈಸೂರು

ದಿ.19ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ

ಮೈಸೂರು,ಆ.13 : ಶ್ರೀರಾಘವೇಂದ್ರ ಸ್ವಾಮಿಗಳ   348ನೇ ಆರಾಧನ ಮಹೋತ್ಸವವನ್ನು ಆ.19ರವರೆಗೆ ದೇವರಾಜ ಮೊಹಲ್ಲಾದ ಸುಬ್ರಾಯದಾಸರ ಪ್ರಸನ್ನ ವೆಂಕಟರಮಣಸ್ವಾಮಿಗಳ ದೇವಸ್ಥಾನದ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿದಿಯಲ್ಲಿ ಏರ್ಪಡಿಸಲಾಗಿದೆ.

ದಿ. 14 . ಚತುರ್ದಶಿ ಬೆಳಗ್ಗೆ 8 ಘಂಟೆಗೆ ಹೋಮ , ಕಳಶಾಭಿಷೇಕ , ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ಸಾಯಂಕಾಲ ಗೋಪೂಜೆ ಉತ್ಸವ. ದಿ. 15.ಗುರುವಾರ ಹುಣ್ಣಿಮೆ ಬೆಳಗ್ಗೆ 8 ಘಂಟೆಗೆ ಸತ್ಯನಾರಾಯಣ ಪೂಜೆ, ದಿ. 16. ಶ್ರೀಗುರುಸಾರ್ವಭೌಮರ ಪೂರ್ವಾರಾಧನಾ , ಸಾಯಂಕಾಲ ಮಹಾಮಂಗಳಾರತಿ. ದಿ. 17 .ದ್ವಿತೀಯ ಶ್ರೀ ಗುರುಸಾರ್ವಭೌಮರ ಮಧ್ಯಾರಾಧನಾ ಸಾಯಂಕಾಲ ಉತ್ಸವ. ಮಹಾಮಂಗಳಾರತಿ. ದಿ. 18 .ತೃತೀಯ ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಬೆಳಗ್ಗೆ ಮಹಾರಥೋತ್ಸವ. ದಿ. 19  ಚೌತಿ ಸರ್ವಸಮರ್ಪಣ ಸಾಯಂಕಾಲ ಉತ್ಸವ , ಮಹಾಮಂಗಳಾರತಿ ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಸಕಾಲಕ್ಕೆ ಬಂದು ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ .

ವಿಶೇಷ ಸೂಚನೆ : ದಿನಾ ಸಂಜೆ ಉತ್ಸವ ಕಾರ್ಯಕ್ರಮಗಳು ನಡೆಯುತ್ತೇವೆ ಎಂದು ಧರ್ಮಕರ್ತೃಗಳು ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: