ಸುದ್ದಿ ಸಂಕ್ಷಿಪ್ತ

ಪ್ರಬಂಧ ಮಂಡನೆ : ಸಂವಾದ ನಾಳೆ

ಮೈಸೂರು,ಆ.13 :  ಕುವೆಂಪು ಕನ್ನಡ ಅಧ್ಯಯನ, ಮೈಸೂರು ಸಂಶೋಧನ ವಿದ್ಯಾರ್ಥಿ ವೇದಿಕೆ ವತಿಯಿಂದ  ಪ್ರಬಂಧ ಮಂಡನೆ – ಸಂವಾದ ಕಾರ್ಯಕ್ರಮ – 11 ಕಾರ್ಯಕ್ರಮವನ್ನು  ಆ.14ರಂದು ಬೆಳಗ್ಗೆ 11 ಗಂಟೆಗೆ ಮಾನಸಗಂಗೋತ್ರಿಯ ಭಾಷಾಪ್ರಯೋಗಾಲಯದಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ  ಪ್ರೊ.ಪದ್ಮಾಶೇಖರ್ ,  ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಮೌನರಾಗಗಳು : ಕಾದಂಬರಿ ಬಗ್ಗೆ ಮಹೇಶ್ವರಿ ಹಾಗೂ ದಮನಿತ ಲೋಕದ ದನಿಗಳು : ಎ . ಕೆ . ಹಂಪಣ್ಣ ಕಾವ್ಯ ವಿಷಯವಾಗಿ ರಮೇಶ ಎಂ ಪ್ರಬಂಧ ಮಂಡಿಸಲಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ . ಎನ್ . ಎಂ , ತಳವಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: