ಮೈಸೂರು

ಸ್ತ್ರೀ ಘನತೆಪೂರ್ಣ ಜೀವನ ನಡೆಸಿಕೊಂಡು ಹೋಗಲು ಶಿಕ್ಷಣ ಅನಿವಾರ್ಯ : ಪಿ.ಜಿ.ಎಂ.ಪಾಟೀಲ್

ಸಮಾಜದಲ್ಲಿ  ಸ್ತ್ರೀ ಯಶಸ್ಸು ಹಾಗೂ ಘನತೆಪೂರ್ಣ ಜೀವನ ನಡೆಸಿಕೊಂಡು ಹೋಗಲು ಶಿಕ್ಷಣ ಅನಿವಾರ್ಯ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗ ಇಎಂಆರ್‍ಆರ್‍ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ನೆಲೆಯಲ್ಲಿ ಮಾನವ ಹಕ್ಕುಗಳು, ಕರ್ತವ್ಯಗಳು ಮತ್ತು ಶಿಕ್ಷಣ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯರಿಗೂ ಶಿಕ್ಷಣ ನೀಡಬೇಕೆಂದು ಜ್ಯೋತಿಬಾ ಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕವಾಗಿ ಹೋರಾಟ ನಡೆಸಿದರು.  ಮಹಿಳೆಯ ಶಕ್ತಿ ಹೀನ ಸ್ಥಿತಿಯನ್ನು ನಿವಾರಿಸಲು ಅನೇಕ ಕಾನೂನುಗಳು ಜಾರಿಗೆ ಬಂದವು. ಮಹಿಳೆ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಕಾನೂನುಗಳು ಸಹಾಯಕವಾಗಲಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ಸಮ್ಮೇಳನವನ್ನು ಮೈಸೂರು ವಿವಿ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಗಂಡು ಹೆಣ್ಣಿನ ನಡುವೆ ದೊಡ್ಡ ಕಂದಕವಿದೆ. ಅದರ ನಿವಾರಣೆ ಶಿಕ್ಷಣ, ಸಮಾನತೆ ಪರಿಕಲ್ಪನೆ, ಸಮಾನ ಅವಕಾಶಗಳ ನಿರ್ಮಾಣವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗ ಮುಖ್ಯಸ್ಥ ಪಿ.ರಮೇಶ್ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಆರ್.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: