ಮೈಸೂರು

ಚೇತನ -2017 ವಾರ್ಷಿಕ ಸಂಚಿಕೆ ಲೋಕಾರ್ಪಣೆ

ಮೈಸೂರಿನ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಚೇತನ-2017 ವಾರ್ಷಿಕ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ವಾರ್ಷಿಕ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಮಹಾಜನ ಪ್ರಥಮದರ್ಜೆ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ಮಾಧ್ಯಮದ ಮುಖ್ಯಸ್ಥೆ ಡಾ.ಭಾರ್ಗವಿ ಹೆಮ್ಮಿಗೆ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಗಳನ್ನು ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಉತ್ತಮ ಲೇಖಕರಾಗಿ ಹೊರ ಹೊಮ್ಮಲು  ಸಾಧ್ಯ. ಅವರ ಬುದ್ಧಿವಂತಿಕೆ ತೀಕ್ಷ್ಣತೆಯನ್ನು ಒರೆಗೆ ಹಚ್ಚುವ ಕೆಲಸವಾಗಬೇಕು ಎಂದರು. ಇಂದಿನ ವಿದ್ಯಾರ್ಥಿಗಳು ಕನ್ನಡವನ್ನು ಮರೆಯುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಮೈಸೂರಿನಲ್ಲಿರುವಷ್ಟು ಕನ್ನಡ ಪತ್ರಿಕೆಗಳು ಬೇರೆಲ್ಲಿಯೂ ಇಲ್ಲ. ಅನ್ಯ ಭಾಷಿಕರೂ ಸಹ ಕನ್ನಡವನ್ನು ಕಲಿಯುವ ಸಾಮರ್ಥ್ಯ ಬೆಳೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಿ.ಆರ್.ನೀಲಕಂಠ, ಉಪಪ್ರಾಂಶುಪಾಲ ವಿಜಯ ಎಂ.ಎಸ್, ಖುಷಿ ಸಂಸ್ಕೃತಿ ವಿದ್ಯಾಕೇಂದ್ರದ ರಮೇಶ್ ಚಂದ್ರ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: