ಮೈಸೂರು

ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ : ಇಬ್ಬರ ಬಂಧನ:  ಓರ್ವ ಯುವತಿಯ ರಕ್ಷಣೆ

ಮೈಸೂರು,ಆ.14:- ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿರುವ ಸಿಸಿಬಿ ಪೊಲೀಸರು   13/08/2019 ರಂದು  ಮಾಹಿತಿ ಮೇರೆಗೆ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ್ 1ನೇ ಹಂತ, 3ನೇ ಕ್ರಾಸ್‍ನಲ್ಲಿರುವ ಮನೆಯೊಂದರ ಮೇಲೆ ಮಾಡಿ, ಹುಡುಗಿಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶೀಲಾ ಬಿನ್ ಚೌಡಯ್ಯ, (40), ಪಾಂಡವಪುರ, ಮಂಡ್ಯ ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಧು ಬಿನ್ ಜವರೇಗೌಡ, ಕೊಕ್ಕರೇಹುಂಡಿ, ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ ಎಂಬವನನ್ನು ವಶಕ್ಕೆ ಪಡೆದು ವೇಶ್ಯಾವಾಟಿಕೆಗೆ ದೂಡಿದ್ದ ಓರ್ವ ಯುವತಿಯನ್ನು ರಕ್ಷಿಸಿ, ವೇಶ್ಯಾವಾಟಿಕೆಗೆ ಬಳಸಲಾಗಿದ್ದ 01 ಮೊಬೈಲ್ ಫೋನ್ ಮತ್ತು ಇದರಿಂದ ಸಂಪಾದಿಸಿದ್ದ  3700ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾ ಮತ್ತು ಸು) ಮುತ್ತುರಾಜು ಮತ್ತು ಸಿಸಿಬಿ ಯ ಪ್ರಭಾರ ಎಸಿಪಿ ಜಿ.ಎನ್.ಮೋಹನ್   ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್ ಎ.ಮಲ್ಲೇಶ್, ಹೆಬ್ಬಾಳ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಗುರುಪ್ರಸಾದ್ ಎ, ಎಎಸ್‍ಐ ರಾಜು ಸಿಬ್ಬಂದಿಯವರಾದ ಜೋಸೆಫ್ ನರೋನ, ಶ್ರೀನಿವಾಸ್ ಪ್ರಸಾದ್, ದೀಪಕ್, ರಘು, ರಾಜಶ್ರೀ, ಮೋಹನ್ ಕುಮಾರ್, ಶ್ರೀನಿವಾಸ. ಕೆ ಜೆ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: