ಮೈಸೂರು

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ವತಿಯಿಂದ ಮಾನವ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮ

ಮೈಸೂರು,ಆ.14:- ಭಾರತವು ಅಂಗಾಂಗ ಕಸಿಯ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಒಂದು ದಶಲಕ್ಷಕ್ಕೂ ಹೆಚ್ಚು ಜನರು ಅಂತಿಮ ಹಂತದ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ವಾರ್ಷಿಕವಾಗಿ 3,500 ಕಸಿಗಳನ್ನು ಮಾತ್ರ ನಡೆಸಲಾಗುತ್ತದೆ. ಪ್ರತಿದಿನ ಅಂಗಾಂಗಗಳಿಗಾಗಿ ಕಾಯುತ್ತಿರುವ ಕನಿಷ್ಠ 15ರೋಗಿಗಳು ಸಾಯುತ್ತಾರೆ. ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಈ ಕಾಯುವ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗೊಳ್ಳುತ್ತಿದೆ. ಅಂಗದಾನದ ಬಗ್ಗೆ ಜಾಗೃತಿ ಮೂಡಿಸುವುದು ಈ ಖಿನ್ನತೆಯ ಸನ್ನಿವೇಶದಿಂದ ಹೊರಬರುವ ಏಕೈಕ ಮಾರ್ಗವಾಗಿದೆ. ನಮ್ಮಲ್ಲಿ ಹೆಚ್ಚು ಸಂಭಾವ್ಯ ದಾನಿಗಳು ಇದ್ದಾರೆ, ಅವರಿಂದ ಜೀವಗಳನ್ನು ಉಳಿಸಲು ಅಂಗಾಂಗಗಳು ಲಭ್ಯವಾಗುವ ಸಾಧ್ಯತೆ ಹೆಚ್ಚು. ಕೊನೆಯ ಹಂತದ ಅನೇಕ ಅಂಗ ರೋಗಗಳಿಗೆ, ಅಂಗಾಂಗ ಕಸಿ ಮಾಡುವಿಕೆಯು ಹೆಚ್ಚು ಆದ್ಯತೆಯ  ಚಿಕಿತ್ಸೆಯಾಗಿದೆ. ಅಂಗಾಂಗ ಕಸಿ ಮಾಡುವ ಅವಶ್ಯಕತೆ ಅದರ ಲಭ್ಯತೆಗಿಂತ ಹೆಚ್ಚಾಗಿದೆ. ಆದ್ದರಿಂದ, ರೋಟರಿ ಮೈಸೂರಿನ ಸಹಯೋಗದೊಂದಿಗೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗಳು “ಪುನರ್ಜನ್ಮ” ಬ್ಯಾನರ್ ಅಡಿಯಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿವೆ.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯು ತನ್ನ ಪ್ರದೇಶದ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಫಲಿತಾಂಶಗಳನ್ನು ನೀಡುತ್ತಿವೆ. ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಸಿ ಪರವಾನಗಿಯಂತಹ ಪ್ರಮುಖ ಮಾನವ ಅಂಗಾಂಗ ಕಸಿಗಳೊಂದಿಗೆ  NABH ಮತ್ತುNABL ಮಾನ್ಯತೆಯನ್ನು ಹೊಂದಿದೆ. ಪೂರ್ಣ ಪ್ರಮಾಣದ ತುರ್ತು ಮತ್ತು ಐಸಿಯು ಆರೈಕೆ ಸೌಲಭ್ಯಗಳೊಂದಿಗೆ ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಬದುಕುಳಿಯುವ ಮತ್ತು ಚಿಕಿತ್ಸೆಯ ಆಯ್ಕೆಗಳ ಉತ್ತಮ ಅವಕಾಶಗಳನ್ನು ಸಹ ನೀಡುತ್ತಿದೆ. ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕ್ಲಿನಿಕಲ್ ಮತ್ತು ಸೇವಾ ಶ್ರೇಷ್ಠತೆಯ ದೃಷ್ಟಿಯಿಂದ ಆದರ್ಶಪ್ರಾಯವಾದ ಫಲಿತಾಂಶಗಳನ್ನುನೀಡಿದೆ ಮತ್ತು ಹೆಚ್ಚಿನ ನುರಿತ ಸಲಹೆಗಾರರು ನಮ್ಮಲ್ಲಿ ದಿನದ 24 ಘಂಟೆಯು ಲಭ್ಯರಿರುತ್ತಾರೆ.

ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು ಮತ್ತು ರೋಟರಿ ಮೈಸೂರು ಈ ವರ್ಷಪೂರ್ತಿ ಅಂಗಾಂಗ ದಾನದ ಜಾಗೃತಿಯನ್ನು ಮೂಡಿಸಲು ಮೈಸೂರು ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕೇಂದ್ರೀಕರಿಸಿದೆ. ವಿಶ್ವ ಅಂಗಾಂಗ ದಾನದ ದಿನದಂದು, ಅಂದರೆ, ಆಗಸ್ಟ್13 ರಂದು, ಕೆ ಆರ್ ಎಸ್ ರಸ್ತೆಯ ರೋಟರಿ ಶಾಲೆಯಲ್ಲಿ ಅಂಗಾಂಗದಾನದ ಅಭಿಯಾನವನ್ನು ಪ್ರಾರಂಭಿಸಲಾಯಿತು

ಈ ಮೊದಲು ಅಂಗಾಂಗದಾನ ಮಾಡಿದ ಮತ್ತು ಸ್ವೀಕರಿಸಿದ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ರೋಗಿಗಳು, ತಮ್ಮ ಅನುಭವಗಳನ್ನು ಹಂಚಿಕೊಂಡರು, ಯಕೃತ್ತು ಸಮಸ್ಯೆಯಿಂದ ಬಳುತ್ತಿದ್ದ ರೋಗಿ . ನವೀನ್ ಕುಮಾರ್ ಅವರು ತಮ್ಮ ತಾಯಿಯಿಂದ ಯಕೃತ್ತನ್ನು ದಾನ ಪಡೆದು ಈಗ ಆರೋಗ್ಯವಾಗಿದ್ದು ಅವರೂ ಕೂಡ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದರು.  ಎಲ್ಲಾ ರೋಟರಿಕ್ಲಬ್ ಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿ, ಲಯನ್ಸ್ ಕ್ಲಬ್ ಮತ್ತು ಯಂಗ್ ಇಂಡಿಯನ್ ಸದಸ್ಯರು ಈ ಕಾರ್ಯವನ್ನು ಬೆಂಬಲಿಸಿದರು ಮತ್ತು ಅಂಗದಾನಿ ಮತ್ತು ಸ್ವೀಕರಿಸುವವರನ್ನು ಸನ್ಮಾನಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: