ಕರ್ನಾಟಕಪ್ರಮುಖ ಸುದ್ದಿ

ಭೂ ಕಕ್ಷೆಯನ್ನು ಯಶಸ್ವಿಯಾಗಿ ದಾಟಿದ ಚಂದ್ರಯಾನ-2

ಬೆಂಗಳೂರು,ಆ.14- ಬಹುನಿರೀಕ್ಷಿತ ಚಂದ್ರಯಾನ -2 ಯೋಜನೆಯ ಮಹತ್ವದ ಘಟ್ಟ ಇಂದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ನೌಕೆಯನ್ನು ಹೊತ್ತ ರಾಕೆಟ್ ಅನ್ನು ಭೂ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಎತ್ತರಿಸುವ ಕಾರ್ಯವನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ಇಸ್ರೋದ ನಿಯಂತ್ರಣ ಕೊಠಡಿಯಿಂದ ಈ ಕಕ್ಷೆ ಎತ್ತರಿಸುವಿಕೆ ಕಾರ್ಯವನ್ನು ಇಂದು 2.21 ಗಂಟೆಗೆ ಯಶಸ್ವಿಯಾಗಿ ಮಾಡಲಾಯಿತು ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಚಂದ್ರಯಾನ ನೌಕೆ ಯಶಸ್ವಿಯಾಗಿ ಉಡ್ಡಯನಗೊಂಡ ಬಳಿಕ ಜುಲೈ 23ರಿಂದ ಆಗಸ್ಟ್ 6ರವರೆಗೆ ಒಟ್ಟಾರೆಯಾಗಿ ಐದು ಬಾರಿ ಚಂದ್ರಯಾನ ನೌಕೆಯ ಕಕ್ಷೆಯನ್ನು ಎತ್ತರಿಸಲಾಗಿದೆ.

ಈ ಕಕ್ಷೆ ಎತ್ತರಿಸುವಿಕೆ ಸಂದರ್ಭದಲ್ಲಿ ನೌಕೆಯಲ್ಲಿದ್ದ ದ್ರವ ಇಂಧನವನ್ನು ಸುಮಾರು 1203 ಸೆಕೆಂಡುಗಳವರೆಗೆ ಅಂದರೆ 20 ಗಂಟೆಗಳವರೆಗೆ ಉರಿಸಲಾಯಿತು. ಇದರೊಂದಿಗೆ ಚಂದ್ರಯಾನ ನೌಕೆಯು ಇದೀಗ ಸರಿಯಾದ ಪಥದಲ್ಲೇ ಚಂದ್ರನ ಕಕ್ಷೆಯತ್ತ ಸಾಗುತ್ತಿದೆ. (ಎಂ.ಎನ್)

Leave a Reply

comments

Related Articles

error: