ಮೈಸೂರು

ಸಂತ್ರಸ್ತರ ನೆರವಿಗೆ ಧಾವಿಸಿದ ನಗರಪಾಲಿಕೆ ಸದಸ್ಯರು

ಮೈಸೂರು,ಆ.14-ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಗರಪಾಲಿಕೆ ಸದಸ್ಯರು ಧಾವಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳಾದ 5 ಸಾವಿರ ಚಾಪೆ, ಬೆಡ್ ಶೀಟ್, ಸ್ತ್ರೀಯರ ಹಾಗೂ ಪುರುಷರ ಬಟ್ಟೆಗಳನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಿ ಕೊಡಲಾಯಿತು. ಅಲ್ಲದೆ, ಪರಿಹಾರ ನಿಧಿಯನ್ನು ಸಂಗ್ರಹಿಸಿ ಆ ಹಣವನ್ನು ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಜಿ.ರೂಪ ಯೋಗೇಶ್, ಸಾತ್ವಿಕ್ ಸಂದೇಶ್, ರುಕ್ಮಿಣಿ ಮಾದೇಗೌಡ, ಅಶ್ವಿನಿ ಆರ್.ಅನಂತು, ಶ್ರೀಧರ್, ಮಾದೇಗೌಡ, ಪ್ರವೀಣ್ ಜೈನ್, ಪ್ರಕಾಶ್ ಜೈನ್, ಚಂಗಪ್ಪ, ರವಿಕುರುಬಾರಹಳ್ಳಿ, ರಮೇಶ್, ಕ್ಯಾಂಟೀನ್ ನಾಗಣ್ಣ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: