ಕರ್ನಾಟಕ

ನೆರೆ ಪೀಡಿತ ಭಾಗಗಳಿಗೆ ಸುಮಲತಾ ಅಂಬರೀಶ್ ಭೇಟಿ: ಸ್ಥಳೀಯರೊಂದಿಗೆ ಸಭೆ

ಮಂಡ್ಯ,ಆ.14-ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್ ಇಂದು ನೆರೆ ಪೀಡಿತ ಮಂಡ್ಯದ ಭಾಗಗಳಿಗೆ ಭೇಟಿ ನೀಡಲಿದ್ದಾರೆ.

ಕಾವೇರಿ ತೀರದ ಮಂಡ್ಯದ ಹಲವು ಭಾಗಗಳು ನೆರೆಯಿಂದ ತೊಂದರೆಗೆ ಒಳಗಾಗಿದ್ದು, ನಿಮಿಷಾಂಬಾ ದೇವಾಲಯ, ಶ್ರೀರಂಗಪಟ್ಟಣ ಸಂತೆಮಾಳ, ದೊಡ್ಡಪಾಳ್ಯ, ಎಣ್ಣೆಕೊಪ್ಪಲು ಮುಂತಾದ ಗ್ರಾಮಗಳು ನೆರೆಯಿಂದ ತೊಂದರೆಗೆ ಸಿಲುಕಿವೆ.

ಈ ಎಲ್ಲ ಗ್ರಾಮಗಳಿಗೆ ಸುಮಲತಾ ಅವರು ಭೇಟಿ ನೀಡಲಿದ್ದು, ಸ್ಥಳೀಯರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆ ಬಳಿಕ, ಅಧಿಕಾರಿಗಳೊಂದಿಗೂ ಸುಮಲತಾ ಅವರು ಸಭೆ ನಡೆಸಲಿದ್ದಾರೆ.

ಮಂಡ್ಯ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದ ನಂತರ ಸುಮಲತಾ ಅವರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿದ್ದವು. (ಎಂ.ಎನ್)

Leave a Reply

comments

Related Articles

error: