ಪ್ರಮುಖ ಸುದ್ದಿ

ಸಂಸತ್ ಕಟ್ಟಡದ ಹೊರಭಾಗದಲ್ಲಿ ಶಾಶ್ವತ ವರ್ಣರಂಜಿತ ದೀಪ ಉದ್ಘಾಟಿಸಿದ ಪ್ರಧಾನಿ ಮೋದಿ

ದೇಶ(ನವದೆಹಲಿ)ಆ.14:-  ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಂಜೆ ಸಂಸತ್ ಕಟ್ಟಡದ ಹೊರಭಾಗದಲ್ಲಿ ಶಾಶ್ವತ ವರ್ಣರಂಜಿತ ದೀಪಗಳನ್ನು ಉದ್ಘಾಟಿಸಿದರು.

ಈ ಸಂದರ್ಭ ಲೋಕಸಭಾ ಸ್ಪೀಕರ್, ರಾಜ್ಯಸಭಾ ಉಪಾಧ್ಯಕ್ಷರು, ಹಲವಾರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಸಂಸದರು ಉಪಸ್ಥಿತರಿದ್ದರು.

875 ಎಲ್ಇಡಿ ದೀಪಗಳು ರಾಷ್ಟ್ರದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ಹೊಸ ಪರಿಸರ ಮತ್ತು ಸೌಂದರ್ಯವನ್ನು ನೀಡಲಿದೆ.  ಈ ದೀಪಗಳು ವಿದ್ಯುಚ್ಛಕ್ತಿಯನ್ನು ಉಳಿಸಲಿದ್ದು, ಪರಿಸರ ಸ್ನೇಹಿಯಾಗಿರಲಿದೆ. ಆಗಾಗ ಬಣ್ಣಗಳನ್ನು ಬದಲಾಯಿಸಲಿದೆ. ಇನ್ನು ಪಾರ್ಲಿಮೆಂಟ್ ಹೌಸ್ ಹೆಚ್ಚು ಭವ್ಯವಾಗಿ ಕಾಣಲಿದೆ. (ಎಸ್.ಎಚ್)

Leave a Reply

comments

Related Articles

error: