ಮನರಂಜನೆ

ಹಸೆ ಮಣೆ ಏರಲು ನಿರ್ಧರಿಸಿದ್ದಾರಂತೆ ಸ್ಯಾಂಡಲ್ ವುಡ್ ಬೆಡಗಿ ನಟಿ ರಮ್ಯಾ?

ರಾಜ್ಯ(ಬೆಂಗಳೂರು)ಆ.14:- ಸ್ಯಾಂಡಲ್​ ವುಡ್​ನ ಬಹುಬೇಡಿಕೆಯ ನಟಿ, ಜಂಬದಕೋಳಿ ಎಂದೇ ಖ್ಯಾತರಾಗಿದ್ದ  ರಮ್ಯಾ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಕಾಲಿವುಡ್​ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದ ರಮ್ಯಾ  ಸಡನ್ನಾಗಿ ಸಿನಿ ಜೀವನಕ್ಕೆ ವಿದಾಯ ಹೇಳಿ ರಾಜಕೀಯದಲ್ಲಿ ತೊಡಗಿಸಿಕೊಂಡರು.  2 ವರ್ಷಗಳಿಂದ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದೆ ಅಜ್ಞಾತರಾಗಿದ್ದ ರಮ್ಯಾ ಇದೀಗ ಹಸೆ ಮಣೆ ಏರಲು ನಿರ್ಧರಿಸಿದ್ದಾರಂತೆ.

2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಲಿಲ್ಲ. 37 ವರ್ಷದ ರಮ್ಯಾ ನಟಿಯಾಗಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಅವರ ಮದುವೆಯ ಕುರಿತಂತೆ  ಹಲವಾರು ಗಾಳಿ ಸುದ್ದಿಗಳು ಹರಿದಾಡಿದ್ದವು. ಇದೀಗ ರಮ್ಯಾ ನಿಜವಾಗಲೂ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.  ಇವರಿಬ್ಬರೂ  ಏಳೆಂಟು ವರ್ಷಗಳಿಂದ ರಿಲೇಷನ್​ ಶಿಪ್​ನಲ್ಲಿದ್ದು, ಪೋರ್ಚುಗಲ್ ದೇಶದ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ನಿಶ್ಚಿತ ಎನ್ನಲಾಗುತ್ತಿದೆ.

ಕಳೆದ ವರ್ಷವೇ ಈ ಬಗ್ಗೆ ರಮ್ಯಾ ಅವರ ತಾಯಿ ರಂಜಿತಾ ಸುಳಿವು ನೀಡಿದ್ದು, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್​ ಅವರನ್ನು ರಮ್ಯಾ ವರಿಸಲು ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: