ದೇಶಪ್ರಮುಖ ಸುದ್ದಿ

ಮಣಿಪುರ ಚುನಾವಣೆ : ಇರೊಮ್ ಶರ್ಮಿಳಾ ನಾಮಪತ್ರ

ಇಂಫಾಲ: ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ತೌಬಲ್ ವಿಧಾನಸಭಾ ಕ್ಷೇತ್ರದಿಂದ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಗಳಿಸಿದ ಇರೋಮ್ ಶರ್ಮಿಳಾ ಇಂದು (ಫೆ.17) ನಾಮಪತ್ರ ಸಲ್ಲಿಸಿದರು. ಪೀಪಲ್ಸ್ ರಿಸರ್ಜನ್ಸ್ ಆ್ಯಂಡ್ ಜಸ್ಟೀಸ್ ಅಲಯನ್ಸ್ ಪಕ್ಷದಿಂದ ಅವರು ನಾಮಪತ್ರ ಸಲ್ಲಿಸಿದ್ದು, ಇದಕ್ಕಾಗಿ ಅವರು ಇಂಫಾಲದಿಂದ 20 ಕಿಲೋಮೀಟರ್ ದೂರ ಸೈಕಲ್‍ನಲ್ಲಿ ಬಂದಿದ್ದರು.

ಸೇನಾ ಪಡೆಯ ವಿಶೇಷ ಹಕ್ಕುಗಳ ಕಾಯ್ದೆ (ಎಫ್.ಎಸ್.ಪಿ.ಎ) ವಿರೋಧಿಸಿ ಹೋರಾಟಗಾರ್ತಿ ಶರ್ಮಿಳಾ ಅವರು 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಕೊನೆಗೊಳಿಸಿದ್ದರು. ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಒಕ್ರಮ್ ಇಬೊಬಿ ಸಿಂಗ್ ಅವರ ವಿರುದ್ಧ ತೌಬಲ್ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಮಣಿಪುರ ರಾಜ್ಯದಲ್ಲಿ ಮಾರ್ಚ್ 4 ಮತ್ತು 8ರಂದು ವಿಧಾನಸಭೆ ಚುನಾವಣೆ ನಡೆಯುತ್ತದೆ.

Leave a Reply

comments

Related Articles

error: