ಮೈಸೂರು

ಕೊಂಚ ವಿಶ್ರಾಂತಿ ಪಡೆದ ಮಳೆ : ಕಬಿನಿ ಹೊರಹರಿವು 33,708 ಕ್ಯೂಸೆಕ್

ಮೈಸೂರು,ಆ.14:- ಮೈಸೂರಿನಲ್ಲಿ ಕಳೆದ ಹಲವು ದಿನಗಳಿಂದ ಧಾರಾಕಾರ ಸುರಿದ ಮಳೆ ನಿನ್ನೆ ಮತ್ತು ಇಂದು ಕೊಂಚ ವಿಶ್ರಾಂತಿ ಪಡೆದಿದೆ. ಇಂದು ಬೆಳಿಗ್ಗೆ ಮೋಡಕವಿದ ವಾತಾವರಣವಿದ್ದರೂ ಮಳೆ ಸುರಿದ ಕುರಿತು ವರದಿಯಾಗಿಲ್ಲ.

ಇಂದು ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ  ಕಬಿನಿ ಜಲಾಶಯದಲ್ಲಿ ಒಳಹರಿವು 30.027 ಕ್ಯೂಸೆಕ್. ಹೊರಹರಿವು 33,708 ಕ್ಯೂಸೆಕ್,  ಇಂದಿನ ನೀರಿನ ಮಟ್ಟ 2282.58 ಅಡಿ, ಗರಿಷ್ಠ ನೀರಿನ ಮಟ್ಟ 2284 ಅಡಿ, ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52  ಟಿಎಂಸಿ, ಇಂದು ಇರುವ ನೀರಿನ ಸಂಗ್ರಹ 18.60 ಟಿಎಂಸಿ ಇದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಎಸ್​ ಜಲಾಶಯದಲ್ಲಿ  ಗರಿಷ್ಠ ಮಟ್ಟ-124.80, ಪ್ರಸ್ತುತ ಮಟ್ಟ-124.10, ಒಳಹರಿವು-38844, ಹೊರಹರಿವು-32278, ಪ್ರಸ್ತುತ ಸಂಗ್ರಹ-48.475 ಟಿಎಂಸಿ ಇದೆ.

ಮಡಿಕೇರಿ ಜಿಲ್ಲೆಯ ಹಾರಂಗಿ ಜಲಾಶಯದ  ಗರಿಷ್ಠ ಮಟ್ಟ 2,859 ಅಡಿಗಳು,ಇಂದಿನ ನೀರಿನ ಮಟ್ಟ 2856.73 ಅಡಿಗಳು, ಇಂದಿನ ನೀರಿನ ಒಳಹರಿವು 7077 ಕ್ಯೂಸೆಕ್​, ಇಂದಿನ ನೀರಿನ ಹೊರ ಹರಿವು ನದಿಗೆ 2200 ಕ್ಯೂಸೆಕ್​, ನಾಲೆಗೆ 1000 ಕ್ಯೂಸೆಕ್​ ಒಟ್ಟು ಟಿಎಂಸಿ 8.5, ಇಂದಿನ ಟಿಎಂಸಿ 7.73182 ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: